ತುಮಕೂರು(ಕ.ವಾ.)ಮೇ.27: ಜಿಲ್ಲೆಯಿಂದ ಬೆಂಗಳೂರಿನ ಐ.ಟಿ/ಬಿ.ಟಿ. ಸಂಸ್ಥೆಗಳಿಗೆ ಕರ್ತವ್ಯದ ನಿಮಿತ್ತ ಪ್ರತಿನಿತ್ಯ ಪ್ರಯಾಣಿಸುತ್ತಿರುವ ಐ.ಟಿ. ಉದ್ಯೋಗಿಗಳು ತಮ್ಮ ಹಾಗೂ ತಮ್ಮ ಸಂಸ್ಥೆಯ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ಎಲ್ಲಾ ಐಟಿ/ಬಿಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಐ.ಟಿ./ಬಿ.ಟಿ. ಉದ್ಯೋಗಿಗಳು ಪ್ರತಿನಿತ್ಯ ಅಥವಾ ವಾರಕ್ಕೆ ನಾಲ್ಕೈದು ಬಾರಿ ಕರ್ತವ್ಯದ ನಿಮಿತ್ತ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಕೇಂದ್ರದಿಂದ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ ಯೋಜನೆಯ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿದೆ.
ಐ.ಟಿ./ಬಿ.ಟಿ. ಸಂಸ್ಥೆಗಳಿಗೆ ಕರ್ತವ್ಯದ ನಿಮಿತ್ತ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ಐಟಿ ಉದ್ಯೋಗಿಗಳು Google Forms Link: https://docs.google.com ಅಥವಾ
ಕ್ಯೂಆರ್ ಕೋಡ್ನಲ್ಲಿ ತಮ್ಮ ಮಾಹಿತಿಯನ್ನು ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.