ತುಮಕೂರು : ಭಾರತ ದೇಶದ ಬುದ್ದಿವಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಬೇಕೆನ್ನುವ ದೃಷ್ಟಿಯಿಂದ ಇಂದು ವೆಕ್ಟೊ ಶೀಲ್ಡ್ ಉತ್ಪನ್ನವನ್ನು ಪರಿಚಯ ಮಾಡಿದ್ದಾರೆ, ಇದು ಭಾರತ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಅನುಮತಿ ಪಡೆದಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಹೇಳಿದರು.
ನಗರದ ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ಆಯಿಲ್ ಅಂಡ್ ಬಯೋ ಇಂಡಸ್ಟ್ರೀಸ್ ಆಯೋಜಿಸಿದ್ದ ಹೊಸ ಉತ್ಪನ್ನ ವೆಕ್ಟೋ ಶೀಲ್ಡ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ,ರಾಷ್ಟ್ರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ್ ಜಾರಿಗೆ ತಂದು ಸಾಮಾನ್ಯರಿಗೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ, ಯಾವುದೇ ಒಂದು ನಗರಸಭೆ, ಪುರಸಭೆಗಳಲ್ಲಿ, ಮಹಾನಗರ ಪಾಲಿಕೆಗಳಲ್ಲಿ ಕಾಯಿಲೆಗಳ ನಿಯಂತ್ರಣಕ್ಕಾಗಿ ಡಿಡಿಪಿ ಪೌಡರ್ ಗಳನ್ನು ಹಾಕಲಾಗುತ್ತಿತ್ತು, ಆದರೆ ಇಂದು ಅವೆಲ್ಲವೂ ಹೋಗಿದೆ, ನಾವು ತಾಂತ್ರಿಕವಾಗಿ ಎಷ್ಟೇ ಬುದ್ಧಿವಂತನಾದರೂ ಕೂಡ ಔಷಧಿಗಳನ್ನು ಸರಿಯಾಗಿ ಉಪಯೋಗಿಸುವಲ್ಲಿ ವಿಫಲರಾಗಿದ್ದೇವೆ, ದೇಶವು ಅಭಿವೃದ್ಧಿ ಹೊಂದಿರುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು, ದೇಶ, ದೇಶದ ಸಂಸ್ಕಾರ, ಭಾರತೀಯರ ಮುಂದಿನ ಪೀಳಿಗೆಯ ಹೆಜ್ಜೆಯನ್ನ ಯಾವ ರೀತಿ ಬೆಳೆಸಬೇಕು ಎನ್ನುವುದಕ್ಕೆ ಇಂದು ಒಂದು ಸಣ್ಣ ಬಯೋ ತಂತ್ರಜ್ಞಾನವನ್ನು ಮಾಡಿದ್ದಾರೆ.
ಉತ್ಪನ್ನದ ಗುಣಮಟ್ಟವನ್ನು ಕಾಪಾಡಿಕೊಂಡು ಮುಂದೆ ಹೋಗಿ, ಅತಿ ಹೆಚ್ಚು ಬೇಡಿಕೆ ಬಂತು ಗುಣಮಟ್ಟವನ್ನು ಹಾಳು ಮಾಡಬೇಡಿ, ಐದು ವರ್ಷಗಳ ನಿರಂತರ ಹೋರಾಟ ಮಾಡಿ ಈ ಉತ್ಪನ್ನವನ್ನು ಬಿಡುಗಡೆ ಮಾಡಿದ್ದೀರಿ, ಶ್ರಮವು ವ್ಯರ್ಥವಾಗದಂತೆ ಕಾಪಾಡಿಕೊಂಡು ಹೋಗುವುದು ನಿಮ್ಮ ಕೈಯಲ್ಲಿದೆ.
ಇದನ್ನು CA ಗೆ ವಹಿಸಿ,ನಗರದ ಪುರಸಭೆಗಳಲ್ಲಿ ಮಹಾನಗರ ಪಾಲಿಕೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಹೆಚ್ಚಿನ ಆದ್ಯತೆ ಕೊಟ್ಟು, ಇದರ ಕಾರ್ಯ ಮೊದಲು ಶುರು ಮಾಡಿದರೆ 31 ಜಿಲ್ಲೆಗಳಲ್ಲಿ ಬೇಡಿಕೆ ಬರುವುದು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ವೆಕ್ಟೊ ಶೀಲ್ಡ್ ಎನ್ನುವುದು ಸಾರ್ವಜನಿಕ ಆರೋಗ್ಯಕ್ಕೆ ಬೇಕಾಗಿರುವುದು, ಇವತ್ತಿನ ದಿನಮಾನಗಳಲ್ಲಿ ಆರೋಗ್ಯಕ್ಕೆ ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಸೊಳ್ಳೆಗಳ ನಿಯಂತ್ರಣಕ್ಕಾಗಿ ವೆಕ್ಟೋ ಶೀಲ್ಡ್ ಎನ್ನುವ ಉತ್ಪನ್ನವನ್ನು ತಯಾರಿಸಲಾಗಿದೆ, ಇಂದು ನಾವೆಲ್ಲರೂ ಆರೋಗ್ಯವಂತರಾಗಿರಬೇಕಾದರೆ ನಮ್ಮ ಪರಿಸರವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು, ಸೊಳ್ಳೆಗಳಿಂದ ಬರುವ ಖಾಯಿಲೆಗಳು ಹೇರಳ, ಇಂದು ಸಾವಯವ ಕೃಷಿಗೆ ಒತ್ತನ್ನು ನೀಡಬೇಕು ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರ ಶಾಸಕರಾದ ಬಿ ಸುರೇಶ್ ಗೌಡ ಮಾತನಾಡಿ,ಸೊಳ್ಳೆಗಳು ಜನರನ್ನು ಮಾರಣಾಂತಿಕ ಕಾಯಿಲೆಗಳಿಗೆ ಕಾಣವಾಗುತ್ತವೆ, ಐದು ವರ್ಷಗಳ ನಿರಂತರ ಹೋರಾಟ ಮಾಡಿ ವಿಕ್ಟೋ ಶೀಲ್ಡ್ ಉತ್ಪನ್ನವನ್ನು ಜಾರಿಗೆ ತಂದಿದ್ದಾರೆ, ಇಂತಹ ಹೊಸ ಹೊಸ ಸಾವಯವ ಔಷಧಗಳು ಆವಿಷ್ಕಾರಗಳು ಜಾರಿಗೆ ಬರಬೇಕು, ಇದರಿಂದ ಸೊಳ್ಳೆಗಳ ನಿಯಂತ್ರಣ ಮಾಡಬಹುದು ಮತ್ತು ಪರಿಸರ ಸ್ವಚ್ಛವಾಗಿರುತ್ತದೆ ಎಂದರು.


