ದಲಿತ ಅಧ್ಯಕ್ಷೆ ಎಂಬ ಕಾರಣಕ್ಕೆ ಕಿರುಕುಳ
ಬಳುವನೇರಲು ಗ್ರಾಪಂ ಸದಸ್ಯ ಸಿದ್ದಯ್ಯ ವಿರುದ್ಧ ಅಧ್ಯಕ್ಷೆ ಲಲಿತ ಗಂಭೀರ ಆರೋಪ.
ತಿಪಟೂರು: ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬಳುವನೇರಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,ತಾಲೂಕಿನ ಬಳುವನೇರಲು ಗ್ರಾಮ ಪಂಚಾಯಿತಿಯಲ್ಲಿ ನಾನು ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಾನು ದಲಿತೇ ಎಂಬ ಕಾರಣದಿಂದ ನಮ್ಮ ಪಂಚಾಯಿತಿಯ ಸದಸ್ಯ ಸಿದ್ದಯ್ಯ ಎಂಬುವರು ಗ್ರಾಮ ನೈರ್ಮಲ್ಯ ಯೋಜನೆಯಡಿಯಲ್ಲಿ ಬೇರೆಯವರಿಗೆ ಕೆಲಸ ನೀಡಿ, ಆ ಬಿಲ್ಲನ್ನು ನನಗೆ ಮಾಡಿಕೊಡಿ ಎಂದು ಪದೇ ಪದೇ ನಾನು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಸಂದರ್ಭದಲ್ಲಿ ಚರಂಡಿ ಸ್ವಚ್ಛತಾ ಬಿಲ್ಲಿಗೆ ಸಹಿ ಹಾಕು ಇಲ್ಲದಿದ್ದರೆ, ನಿಮ್ಮ ವಿರುದ್ಧ ಹೋರಾಟ ಮತ್ತು ಲೋಕಾಯುಕ್ತಕ್ಕೆ ಅರ್ಜಿ ಬರೆಯುತ್ತೇನೆ ಎಂದು ಕಿರುಕುಳ ನೀಡುತ್ತಿರುತ್ತಾರೆ. ನಾನು ಒಬ್ಬ ದಲಿತ ವರ್ಗದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಇವರಿಗೆ ಇಷ್ಟವಿಲ್ಲ. ಆದ್ದರಿಂದ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮೇಲೆ ಮತ್ತು ನನ್ನ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ತೇಜೋವದೆ ಮಾಡುತ್ತಿದ್ದಾರೆ. ಎಂದು ಗಂಭೀರ ಆರೋಪ ಮಾಡಿದರು.
ಗ್ರಾಪಂ ಸದಸ್ಯ ಎಂ.ಬಿ. ಮರುಳಯ್ಯ ಮಾತನಾಡಿ, ಸಿದ್ದಯ್ಯನವರು ಅಧ್ಯಕ್ಷರ ಮತ್ತು ಪಿಡಿಓ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಪಂಚಾಯಿತಿಯಲ್ಲಿ,ಕೆಲಸ ಮಾಡದ ರೀತಿಯಲ್ಲಿ ತೊಂದರೆ ನೀಡುತ್ತಿದ್ದಾರೆ. ನಕಲಿ ಬಿಲ್ಲಿಗೆ ಸಹಿ ಮಾಡಿ,ನಮ್ಮ ಬಿಲ್ಲನ್ನು ಸಭೆಯಲ್ಲಿ ಅನುಮೋದನೆ ಮಾಡುವಂತೆ ತಾಕಿತ್ತು ಮಾಡುತ್ತ, ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್, ಸದಸ್ಯರಾದ ಶಿವಸ್ವಾಮಿ,ಹಿರೇ ಲಿಂಗಯ್ಯ,ಭಾಗ್ಯ,ಪ್ರಮೀಳಾ ಮತ್ತು ಭಾಗ್ಯಮ್ಮ ಹಾಜರಿದ್ದರು.