ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಸುನಿಲ್ ಆಯ್ಕೆ
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಸುನಿಲ್ ಸಿ.ಆರ್. ಆಯ್ಕೆಯಾದರು.
ಮುಂದಿನ ಮೂರು ವರ್ಷಗಳ ಅವಧಿಗೆ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದು, ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಸುನಿಲ್ ಸಿ.ಆರ್., ಗೌರವಾಧ್ಯಕ್ಷರಾಗಿ ಸೋಮಶೇಖರ್ ಡಿ.ಬಿ., ಉಪಾಧ್ಯಕ್ಷರಾಗಿ ಬಸವರಾಜು, ಕಾರ್ಯದರ್ಶಿಯಾಗಿ ಮಧುಚಂದ್ರ, ಸಹ ಕಾರ್ಯದರ್ಶಿಯಾಗಿ ಅಶೋಕ್, ಖಜಾಂಚಿಯಾಗಿ ಎಸ್.ಕೆ. ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ನೂರ್ ಅಹಮದ್, ವೆಂಕಟೇಶ್ ಆಯ್ಕೆಯಾದರು.
ನೂತನ ನಿರ್ದೇಶಕರಾಗಿ ಬಸವರಾಜ್, ಮುರುಗನ್, ವಿಜಯಕುಮಾರ್, ಶಾಂತಕುಮಾರ್, ಗಿರೀಶ್, ಹರೀಶ್, ದಯಾನಂದ್, ಸತೀಶ್, ಉಮಾಶಂಕರ್, ಆನಂದ್, ಹರೀಶ್, ನವೀನ್, ರವೀಂದ್ರ ಆಯ್ಕೆಯಾದರು.
ಆಯ್ಕೆಯಾದ ಪದಾಧಿಕಾರಿಗಳು ಇಂದು ಪಟ್ಟಣದ ಶ್ರೀ ಸತ್ಯಗಣಪತಿ, ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನೂತನ ಪದಾಧಿಕಾರಿಗಳನ್ನು ಛಾಯಾಗ್ರಾಹಕರ ಸಂಘದ ಸರ್ವ ಸದಸ್ಯರು ಅಭಿನಂದಿಸಿದರು.
ನೂತನ ಅಧ್ಯಕ್ಷ ಸುನಿಲ್ ಸಿ.ಆರ್. ಮಾತನಾಡಿ, ಛಾಯಾಗ್ರಾಹಕರ ಸಂಘದ ಸದಸ್ಯರೆಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಸಂಘವನ್ನು ಸಾಕಷ್ಟು ಮಂದಿ ಹಿರಿಯರು ಮುನ್ನಡೆಸಿದ್ದಾರೆ. ಅವರ ಮಾರ್ಗದರ್ಶನ ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದ ಅವರು, ಸಂಘಕ್ಕೆ ಹೊಸ ಸದಸ್ಯರು ನೋಂದಣಿಯಾಗಬೇಕು. ಸಂಘದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಹಾಗೂ ಸಂಘದಿಂದ ದೊರೆಯುವ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.