ತುಮಕೂರು : ಕನ್ನಡ ನಾಡು ವಿವಿಧ ಸಂಸ್ಕೃತಿಯನ್ನು ಪಡೆದುಕೊಂಡಿರುವ ನಾಡು,ಕನ್ನಡ ಭಾಷೆಗೆ, ಸಂಸ್ಕೃತಿಗೆ,ಪರಂಪರೆಗೆ, ಪರಂಪರೆಗೆ,ಕವಿಗಳು ಕೊಟ್ಟಿರುವ ಕೊಡುಗೆ ಅಪಾರ,ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರಿಗೆ ಒಂದು ದಿಕ್ಸೂಚಿ ಆಗಬೇಕು, ಎಂದು ಡಾ.ಜಿ ಪರಮೇಶ್ವರ್ ಹೇಳಿದರು.
ನಗರದ ಗಾಜಿನಮನೆ, ಅಮಾನಿಕೆಕೆರೆಯಲ್ಲಿ ಆಯೋಜಿಸಿದ್ದ 17 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕುವೆಂಪು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕುಣಿಗಲ್ ತಾಲ್ಲೂಕಿನವರಾದ ಡಾ. ಕರಿಗೌಡ ಬೀಚನಹಳ್ಳಿಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಮಯೋಚಿತವಾದದ್ದು, ಮೈಸೂರು ರಾಜರ ಆಳ್ವಿಕೆ ಕಾಲದಲ್ಲಿ 1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ದಶಕಗಳನ್ನೇ ಮೀರಿದೆ,ತುಮಕೂರಿನಲ್ಲಿ 1966 ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ಅರವತ್ತರ ಸಂವತ್ಸರದಲ್ಲಿದೆ. ತುಮಕೂರಿನಲ್ಲಿ ಕೂಡ ಅಖಿಲ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಗಳು ಕೂಡ ಆಗಿವೆ, ಕನ್ನಡ ರಕ್ಷಣೆಯ ಬೆಳವಣಿಗೆಯ ನಡುವೆಯು ಕೂಡ ಕನ್ನಡ ಸಾಹಿತ್ಯವನ್ನು ಉಳಿಸಿಕೊಂಡು ಬಂದಿದ್ದೇವೆ, ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಕನ್ನಡದ ಬೆಳವಣಿಗೆ ಅಲ್ಲ ಕರುನಾಡಿನ ಬೆಳವಣಿಗೆ ಆಗಬೇಕು, ಇತ್ತೀಚಿನ ದಿನಗಳಲ್ಲಿ ಅಂತಹ ಬೆಳವಣಿಗೆ ಕಡಿಮೆಯಾಗಿದೆ,ಆದರೆ ಕನ್ನಡ ನಾಡಿನ ಬೆಳವಣಿಗೆ ಕನ್ನಡಿಗರಿಂದಲೇ ಆಗಬೇಕೆ ಹೊರತು ಬೇರೆಯವರಿಂದ ಸಾಧ್ಯವಿಲ್ಲ.




