ತುಮಕೂರು : ನಗರದ ಕೋತಿತೋಪು ಬಳಿಯಿರುವ ಮಾಜಿ ಶಾಸಕ ಗಂಗಹನುಮಯ್ಯ ಮನೆಗೆ ಗುರುವಾರ ಕಾರ್ಯಕ್ರಮ ನಿಮಿತ್ತವಾಗಿ ತುಮಕೂರಿಗೆ ಆಗಮಿಸಿದ್ದ ಸಚಿವ ಕೆ.ಹೆಚ್ ಮುನಿಯಪ್ಪನವರು ಭೇಟಿ ನೀಡಿದ್ದಾರೆ. ಇದೇ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಕೆ.ಹೆಚ್ ಮುನಿಯಪ್ಪನವರು ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ದಲಿತ ಸಿಎಂ ಕೂಗಿನ ಬೆನ್ನಲ್ಲೆ ಸಿಎಂ ಸ್ಥಾನಕ್ಕೆ ಎಡ-ಬಲ ಶಾಸಕರ ನಡುವೆ ಪೈಪೋಟಿ ಶುರುವಾಗಿದೆ.ಬಲಗೈ ಸಮಾಜದ ಡಾ ಜಿ ಪರಮೇಶ್ವರ್ ಗೆ ಸಿಎಂ ಸ್ಥಾನ ನೀಡುವಂತೆ ಹೋರಾಟ ನಡೆದಿತ್ತು.ಈ ಬೆನ್ನಲ್ಲೆ ಎಡಗೈ ಸಮಾಜ ಪಕ್ಷದ ಹಿರಿಯರಾಗಿರುವ ಕೆ ಎಚ್ ಮುನಿಯಪ್ಪಗೆ ಸಿಎಂ ಸ್ಥಾನಕ್ಕೆ ಆಗ್ರಹ ಕೇಳಿ ಬಂದಿತ್ತು.ಇದರ ನಡುವೆ ತುಮಕೂರಿಗೆ ಭೇಟಿ ನೀಡಿದ್ದ ವೇಳೆ ಮುಂದಿನ ಸಿಎಂ ಎಂದು ಅಭಿಮಾನಿಗಳು ಜೈಕಾರ ಕೂಗಿದ್ದಾರೆ.
ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಪೈಪೋಟಿ ಇದ್ದು “ಮುಂದಿನ ಮುಖ್ಯಮಂತ್ರಿ ಕೆ.ಹೆಚ್ ಮುನಿಯಪ್ಪ” ಘೋಷಣೆ ಮತ್ತಷ್ಟು ಕುತೂಹಲತೆಯನ್ನು ಹುಟ್ಟು ಹಾಕಿದೆ.
ಇದೆ ವೇಳೆ ಮಾಜಿ ಶಾಸಕ ಗಂಗಹನುಮಯ್ಯನವರು ಕೆ ಎಚ್ ಮುನಿಯಪ್ಪ, ವೈ, ಎಚ್ ಹುಚ್ಚಯ್ಯನವರಿಗೆ ಸನ್ಮಾನಿಸಿದರು.


