ಸಂವಿಧಾನ ಮತ್ತು ಹಿಂದುತ್ವದ ತಿಕ್ಕಾಟದಲ್ಲಿ ಯಾರಿಗೆ ಒಲಿಯಲಿದೆ ‘ತುಮಕೂರು’
ಸಂವಿಧಾನ ವಿರೋಧಿ ಅಲೆ ಹಾಗೂ ೫ ಗ್ಯಾರಂಟಿಗಳನ್ನೇ ನಂಬಿದ್ಯಾ ಕಾಂಗ್ರೆಸ್? ಹಿಂದುತ್ವವೇ ಶ್ರೀರಕ್ಷೆಯಾ ಮೈತ್ರಿಗೆ?
ತುಮಕೂರು ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಚುನಾವಣೆ ಕ್ಷೇತ್ರಗಳಿದ್ದು ಕುಣಿಗಲ್ ತಾಲೂಕು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಜಯದೇವ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಹಾಗೂ ದೇವೇಗೌಡರ ಅಳಿಯ ಡಾ|| ಸಿ.ಎನ್.ಮಂಜುನಾಥ್ ಅಭ್ಯರ್ಥಿಯಾದರೆ ಕಾಂಗ್ರೆಸ್ ನಿಂದ ಹಾಲಿ ಸಂಸದ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಏಕೈಕ ಸಂಸದರಾಗಿದ್ದ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ರವರು ಕಣದಲ್ಲಿದ್ದು, ಬಾರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾದರೂ ಹಾಲಿ ಸಂಸದರ ಚಾಕ ಚಾಣಕ್ಯ ,ಕನ್ನಡ ನಾಡಿನ ನಮ್ಮ ನಾಡು ನಮ್ಮ ತೆರಿಗೆ ಹಾಗೂ ದಕ್ಷಿಣ ಭಾರತದ ಅಸ್ಮಿತೆಯ ಪರ ದಿಟ್ಟ ಹೋರಾಟ ಮತ್ತು ಅಭಿವೃದ್ಧಿ ಯ ವಿಚಾರದಲ್ಲೂ ಮುಂಚೂಣಿಯಲ್ಲಿರುವ ಇವರಿಗೆ ಜನಸಾಮಾನ್ಯರ ಸ್ಪಂದನೆ ಯಾವ ಮಟ್ಟಿಗೆ ಗಳಿಸುತ್ತಾರೆ ಎಂಬುದರ ಮೇಲೆ ನಿಂತಿದೆ . ಡಾ||ಸಿ.ಎನ್. ಮಂಜುನಾಥ್ ಅವರ ಸರಳ ಸ್ವಭಾವ ರಾಜಕೀಯ ರಂಗದಲ್ಲಿ ಯಶಸ್ವಿ ಕಾಣುವುದೇ ಎಂಬುದನ್ನು ನೋಡಬೇಕಿದೆ.
ಮತ್ತೊಂದು ಲೋಕಸಭಾ ಕ್ಷೇತ್ರ ಚಿತ್ರದುರ್ಗ, ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲೂಕುಗಳು ಸೇರ್ಪಡೆಗೊಂಡಿರುತ್ತದೆ. ಬಿಜೆಪಿ ಹಾಲಿ ಸಂಸದ ಹಾಗೂ ಹಾಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಟಿಕಿಟ್ ನಿರಾಕರಿಸಿದ್ದಾರೋ ಅಥವಾ ಇವರೇ ನಿರಾಕರಣೆ ಮಾಡಿದ್ದಾರೋ ಅವರ ಸ್ವಯಂ ನಿವೃತ್ತಿಯ ಬಗ್ಗೆ ತಿಳಿಯುತ್ತಿಲ್ಲ. ಆದರೆ ಸಮುದಾಯವನ್ನು ಒಂದೆಡೆ ಸೇರಿಸುವಲ್ಲಿ ಅವರು ನಿಷ್ಕ್ರಿಯರಾದರೂ ಎಂಬ ಭಾವನೆ ಪಕ್ಷದಲ್ಲಿ ತೇಲಾಡುತ್ತಿದೆ ಎಂದು ಕೆಲವರು ಮಾತನಾಡುತ್ತಾರೆ. ಅಥವಾ ಅವರ ಸಾಮರ್ಥ್ಯದ ಕೊರತೆಯೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅವರ ಬದಲಿಗೆ ಅದೇ ಸಮುದಾಯದ ಮಾಜಿ ಸಚಿವ ಬಾಗಲಕೋಟೆ ಜಿಲ್ಲೆಯ ಗೋವಿಂದ ಕಾರಜೋಳರವÀರಿಗೆ ಟಿಕೆಟ್ ನೀಡಿದ್ದಾರೆ .ಆದರೆ ಇವರು ಸಮುದಾಯದ ಭಾಗವಾಗಿ ಎಂದೂ ಬಿಂಬಿಸಿಕೊAಡಿಲ್ಲ ಎಂಬುದು ಅಷ್ಟೇ ಸತ್ಯವೆಂದು ತಿಳಿದವರು ಕ್ಷೇತ್ರದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಕೂಡ ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರಿಗೆ ಟಿಕೆಟ್ ಘೋಷಣೆ ಮಾಡಿದೆ ಆದರೆ ಎರಡು ಪಕ್ಷಗಳಲ್ಲೂ ಬಂಡಾಯದ ಬಿಸಿ ಕಾಣಿಸುತ್ತಿದೆ. ನಿನ್ನೆ ತಾನೇ ಬಿಜೆಪಿಯ ಅಭ್ಯರ್ಥಿ ರಘುನಂದನ್ ಹಾಲಿ ಶಾಸಕ ಚಂದ್ರಪ್ಪನವರ ಪುತ್ರ ಅವರನ್ನು ಯಡಿಯೂರಪ್ಪನವರ ಸಮಾಧಾನಪಡಿಸಿದ ಸುದ್ದಿಗಳು ಕೇಳಿ ಬರುತ್ತದೆ ಆದರೆ ಕಾಂಗ್ರೆಸ್ ನಿಂದ ಇನ್ನೂ ಅಂತಹ ಬೆಳವಣಿಗೆಗಳು ಕಾಣಸಿಗುತ್ತಿಲ್ಲ. ಭೋವಿ ಸಮುದಾಯದ ಮಾಜಿ ಸಚಿವರಾದ ಪಾವಗಡದ ವೆಂಕಟರಮಣಪ್ಪನವರು ತಮ್ಮ ಪುತ್ರ ಕುಮಾರಸ್ವಾಮಿಗೆ ಟಿಕೆಟ್ ಕೇಳಿದ್ದರು ಆದರೆ ಕಾಂಗ್ರೆಸ್ ನಿರಾಕರಿಸಿದ್ದು ಅದೇ ವಿಚಾರವನ್ನು ಇಟ್ಟುಕೊಂಡು ಮಾಜಿ ಸಚಿವರು ಕಾಂಗ್ರೆಸ್ ವಿರುದ್ಧ ಸಿಡಿದಿದ್ದು ಪತ್ರಿಕಾಗೋಷ್ಠಿ ನಡೆಸಿದ್ದು ಮುಂದಿನ ನಡೆ ಏನೆಂಬುದನ್ನು ತಿಳಿಸುವುದಾಗಿ ಘೋಷಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ವೆಂಕಟರಮಣಪ್ಪನವರನ್ನು ಕಾಂಗ್ರೆಸ್ ಪಕ್ಷವಾಗಲಿ ಅಭ್ಯರ್ಥಿಯಾಗಲಿ ಇನ್ನೂ ಭೇಟಿ ಮಾಡಿಲ್ಲವೆಂಬ ಸುದ್ದಿ ಮತ್ತು ಬಂಡಾಯ ಶಮನ ಮಾಡಲು ಅನುಸರಿಸಬೇಕಾದ ಮಾರ್ಗಗಳನ್ನು ಇನ್ನು ಕಾಯ್ದಿರಿಸಿಕೊಂಡಿದೆ ಇದಷ್ಟೇ ತಿಳಿದ ವಿಚಾರ. ಈ ಬಗ್ಗೆ ಯಾವುದೇ ಮುಂದಿನ ಬೆಳವಣಿಗೆಗಳು ಏನಾಗುತ್ತಿದೆ ಎಂಬುದನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತದೆಯೇ ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಸಂದರ್ಭದಲ್ಲಿ ಪಾವಗಡದ ಹಾಲಿ ಶಾಸಕರಾದÀ ಹೆಚ್.ವಿ.ವೆಂಕಟೇಶ್ ಅವರು ತಮ್ಮ ತಂದೆಯ ನಿಲುವನ್ನೇ ಪ್ರತಿಪಾದಿಸುತ್ತಾರೋ ಅಥವಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ನಿಲ್ಲುತ್ತಾರೋ ಎಂಬುದನ್ನು ಕಾದು ನೋಡಬೇಕು.
ಶಿರಾದ ಹಾಲಿ ಶಾಸಕರೂ ಹಾಗೂ ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ರವರು ತುಮಕೂರು ಜಿಲ್ಲೆಯ ಯಾವುದೇ ಲೋಕಸಭಾ ವ್ಯಾಪ್ತಿಯಲ್ಲೂ ಕಾಣಸಿಗುತ್ತಿಲ್ಲ ಕಾರಣ ಏನೆಂಬುದು ಇನ್ನು ಯಾರಿಗೂ ತಿಳಿಯುತ್ತಿಲ್ಲ. ಕಾರಣ ಸ್ಪಷ್ಟವಾಗಿಲ್ಲದಿದ್ದರೂ ಸಮುದಾಯದ ಕಡೆಗಣನೆ ಎಂಬ ಭಾವನೆ ಅವರಲ್ಲಿ ಮೂಡಿದೆ ಎಂದು ಕೆಲವರು ನಿನ್ನೆ ನಡೆದ ಗೌಪ್ಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದುಬಂದಿದೆ. ತಮ್ಮ ಪುತ್ರ ಸಂಜಯ್ಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದು ಹಾಗೂ ಸಮುದಾಯದ ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪನವರಿಗೂ ಸಹ ಟಿಕೆಟ್ ನಿರಾಕರಿಸಿದ್ದು ಶಾಸಕರ ಈ ನಡೆಗೆ ಇದು ಕಾರಣ ಇರಬಹುದಾ ಎಂಬ ಊಹೆ ಮನೆ ಮಾಡಿದೆ. ಈ ವ್ಯಾಪ್ತಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರಮಸಾಗರ ಹೊರತುಪಡಿಸಿ ಮಿಕ್ಕ ಏಳು ಕ್ಷೇತ್ರಗಳಲ್ಲು ಕಾಂಗ್ರೆಸ್ ಜಯಭೇರಿ ಭಾರಿಸಿತ್ತು.ಆ ಮುನ್ನಡೆಯನ್ನು ಕಾಯ್ದುಕೊಳ್ಳುವುದೇ ಕಾಂಗ್ರೆಸ್ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಸಕ್ತ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿರುವAತೆ ಹಾಲಿ ಬಿಜೆಪಿ ಮತ್ತು ಜಾತ್ಯತೀತ ಜನತಾ ದಳದಿಂದ ಮೈತ್ರಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಂಸದ ಮುದ್ದಹನುಮಗೌಡ ಉಮೇದುವಾರಿಕೆ ಅಂತಿಮಗೊAಡಿದೆ.ಸಾAಕೇತಿಕವಾಗಿ ನೆನ್ನೆ ಸೋಮಣ್ಣ ರವರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ದಿನಾಂಕ ಈ ತಿಂಗಳ ನಾಲ್ಕನೇ ತಾರೀಕಿಗೆ ನಿಗದಿಯಾಗಿದೆ.ಈ ಅಭ್ಯರ್ಥಿಗಳ ಹಿನ್ನೆಲೆಯ ವೈಚಿತ್ಯ ಕಾಂಗ್ರೆಸ್ ಶಾಸಕರಿದ್ದ ಗೌಡರು ಜೆಡಿಎಸ್ ಗೆ ಸೇರಿ ಮತ್ತೆ ಕಾಂಗ್ರೆಸ್ ಗೆ ಸೇರಿ ಸಂಸದರಾಗಿ ಆಯ್ಕೆಗೊಂಡಿದ್ದರು. ಆದರೆ ಕಳೆದ ಬಾರಿ ಟಿಕೆಟ್ ತಪ್ಪಿದ್ದರಿಂದ ಬೇಸರಗೊಂಡಿದ್ದ ಅವರು ಬಿಜೆಪಿಗೆ ಸೇರಿ ಅಲ್ಲಿ ತಮ್ಮ ಅಸ್ತಿತ್ವವನ್ನು ಹುಡುಕಿಕೊಳ್ಳಲು ಪ್ರಯತ್ನಿಸುತ್ತಿದ್ದರು ಆದರೆ ಕಾಲದ ಚಕ್ರಕ್ಕೆ ಸಿಲುಕಿ ಬಿಜೆಪಿಯಲ್ಲೂ ಅಸಮಾಧಾನ ಗೊಂಡು ಮತ್ತು ಕಾಂಗ್ರೆಸ್ನ ಆಹ್ವಾನದ ಮೇರೆಗೆ ಇಬ್ಬರೂ ಜಿಲ್ಲಾ ಮಂತ್ರಿಗಳ ಮತ್ತು ಮುಖ್ಯಮಂತ್ರಿಗಳ ಹಾಗೂ ರಾಜ್ಯಾಧ್ಯಕ್ಷರ ಸಮ್ಮತಿಯ ಮೇರೆಗೆ ಕಳೆದ ಬಾರಿ ಕಳೆದುಕೊಂಡಿದ್ದ ಟಿಕೇಟನ್ನು ಪಡೆಯುವಲ್ಲಿ ಯಶಸ್ವಿಯಾದರು. ಟಿಕೆಟ್ ಘೋಷಣೆಯಾದ ನಂತರ ಮತ್ತು ಎಲ್ಲಾ ಎಂಟು ಕ್ಷೇತ್ರಗಳಲ್ಲು ಸಭೆಗಳನ್ನು ನಡೆಸಿ ಔಪಚಾರಿಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಸೋಮಣ್ಣ ಅವರು ಸಹ ಬಿಜೆಪಿ ಹೈಕಮಾಂಡ್ ಸೂಚಿಸಿದಂತೆ ಕಳೆದ ಬಾರಿ ವಿಧಾನಸಭೆಯಲ್ಲಿ ಚಾಮರಾಜನಗರ ಮತ್ತು ವರುಣ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋಲನ್ನು ಕಂಡವರು. ಸೋಮಣ್ಣನವರು ಚಾಮರಾಜನಗರ ಜಿಲ್ಲೆಯ ಮೇಲೆ ಹಿಡಿತವನ್ನು ಸಾಧಿಸಲು ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಬಂದಿದ್ದರು. ಅದು ಅವರಿಗೆ ಒಲಿಯಲಿಲ್ಲ, ಗೋವಿಂದರಾಜ ನಗರ , ಬಿನ್ನಿಪೇಟೆ ಮತ್ತು ವಿಜಯನಗರದಲ್ಲಿ ಅಂದರೆ ಬೆಂಗಳೂರು ನಗರಕ್ಕೆ ಸೀಮಿತವಾಗಿ ಮಾತ್ರ ಸೋಮಣ್ಣನವರ ರಾಜಕೀಯ ಬೆಳವಣಿಗೆ ಸಾಧ್ಯವಾಗಿದ್ದು. ಆದರೆ ಇಂದು ಅವರು ನಾನು ತುಮಕೂರಿಗೆ ಎರಡು ಬಾರಿ ಉಸ್ತುವಾರಿ ಸಚಿವನಾಗಿದ್ದೆ. ಬಿಜೆಪಿಯ ಚುನಾವಣೆಗಳಲ್ಲಿ ಉಸ್ತುವಾರಿ ಕಾರ್ಯದರ್ಶಿಯಾಗಿದ್ದೆ , ಸಿದ್ದಗಂಗಾ ಮಠಕ್ಕೆ ಸಮೀಪವರ್ತಿಯಾಗಿದ್ದು ಆಗಿನ ಸ್ವಾಮೀಜಿಗಳ ಗುರುವಂದನ ಮತ್ತು ಇತರೆ ಉತ್ಸವ ಕಾರ್ಯಕ್ರಮಗಳನ್ನು ನಿರೂಪಿಸುವಲ್ಲಿ ನಾನು ಯಶಸ್ವಿಯಾಗಿದ್ದೆ ಎಂಬ ಮಾತುಗಳನ್ನು ಮಾಡುತ್ತಾ ಅವರ ತುಮಕೂರಿನ ಬಾಂಧವ್ಯ ವಿವರಿಸುತ್ತಾ ಅದನ್ನೇ ಬಂಡವಾಳವಾಗಿ ಮಾಡಿಕೊಂಡು ಸಂಸದ ಜಿಎಸ್ ಬಸವರಾಜು ಮತ್ತಿತರರ ಹೇಳಿಕೆಗಳನ್ನು ಕೇಳಿಕೆಗಳನ್ನು ನಂಬಿ ಇಂದು ತುಮಕೂರಿನ ಬಿಜೆಪಿ ಪಕ್ಷದ ಉಮೇದುವಾರರಾಗಿದ್ದಾರೆ.
ಜಿಲ್ಲೆಯಲ್ಲಿ ಮತದಾರರ ಮಟ್ಟಿಗೆ ಹೇಳುವುದಾದರೆ , ತುಮಕೂರು ಲೋಕಸಭಾ ಕ್ಷೇತ್ರವು ಕೆ.ಲಕ್ಕಪ್ಪನವರ ಕಾಲದಿಂದಲೂ ಇದು ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರವೆಂದೆ ಬಿಂಬಿತವಾಗಿದ್ದು ಹಿಂದೆ ಕೆ.ಲಕ್ಕಪ್ಪ ಮತ್ತು ಕೆ.ಮಲ್ಲಣ್ಣನವರೇ ತುಮಕೂರು ಜಿಲ್ಲೆಯ ಭಾಗಗಳ ಸಂಸದರಾಗಿ ಆಯ್ಕೆಯಾಗುತ್ತಿದ್ದರು. ಆದರೆ ಪರಿಸ್ಥಿತಿಯ ಅನುಗುಣವಾಗಿ ಜಿ.ಎಸ್. ಬಸವರಾಜ್ ಅವರು ಸದಸ್ಯರಾದ ನಂತರ ಎಂ.ಎಸ್.ಮಲ್ಲಿಕಾರ್ಜುನಯ್ಯನವರು ಸಹ ಸಂಸದರಾಗಿ ದೇಶದ ಉಪಸಭಾಪತಿಗಳಾಗಿ ಸೇವೆ ಸಲ್ಲಿಸಿದರು. ಮೇಲ್ನೋಟಕ್ಕೆ ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಂತೆ ಕಂಡು ಬಂದರೂ, ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಅಂದರೆ ಮಾದಿಗ ಸಮುದಾಯವು ಈ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಯಾವ ಆಶ್ಚರ್ಯವೇನು ಏನು ಇಲ್ಲ. ಹಾಗೆ ಗೊಲ್ಲರು ಕುರುಬರು ಮತ್ತು ನಾಯಕ ಜನಾಂಗ ಈ ಜಿಲ್ಲೆಯ ಚುನಾವಣಾ ಫಲಿತಾಂಶ ನಿರ್ಣಾಯಕ ಜಾತಿಗಳೆಂದರೆ ಅತಿಶಯೋಕ್ತಿಯಲ್ಲ.ಸಾದರ ಸಮಾಜ ,ಬಲಿಜ ಸಮಾಜ, ಕುಂಚಿಟಿಗ ಸಮುದಾಯ ಹಾಗೂ ಇತರೆ ಸಣ್ಣಪುಟ್ಟ ಸಮುದಾಯಗಳನ್ನು ಒಗ್ಗೂಡಿಸಿಕೊಂಡರೆ ಮಾತ್ರ ಯಾರಾದರೂ ಚುನಾವಣೆಯಲ್ಲಿ ಯಶ ಕಾಣಬಹುದು.
ತಿಪಟೂರು, ಚಿಕ್ಕನಾಯಕನಹಳ್ಳಿ ಗುಬ್ಬಿ ತಾಲೂಕುಗಳಲ್ಲಿ ಗೋ ಬ್ಯಾಕ್ ಸೋಮಣ್ಣ ಎಂಬ ಮಾತು ಕೇಳಿ ಬಂತು. ಆದರೆ ಕಾಂಗ್ರೆಸ್ ನ ಅಭ್ಯರ್ಥಿಗೆ ಈ ಪರಿಸ್ಥಿತಿ ಇಲ್ಲದಿದ್ದರೂ ಚುನಾವಣಾ ರಣನೀತಿಯಲ್ಲಿ ಸ್ವಲ್ಪ ಎಡವಿದಂತೆ ಕಾಣುತ್ತಿರುವುದಂತೂ ಸ್ಪಷ್ಟ .ಮೊನ್ನೆ ಮಾಜಿ ಶಾಸಕ ಹೆಚ್.ನಿಂಗಪ್ಪನವರು ಕಾಂಗ್ರೆಸ್ ತೊರೆದು ಜನತಾದಳ ಸೇರಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿಲ್ಲ. ಆದರೆ ಇದೇ ಕಾಂಗ್ರೆಸ್ಸನ್ನು ಸೋಲಿಸಲು ಪಣತೊಟ್ಟು ವಿಧಾನಸಭೆ ಚುನಾವಣೆಯಲ್ಲಿ ಹೋರಾಟ ನಡೆಸಿದ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಶಾಸಕರ ಫೋಟೋಗಳು ಕಾಂಗ್ರೆಸ್ನ ಅಧಿಕೃತ ಚುನಾವಣ ಬ್ಯಾನರ್ ಗಳಲ್ಲಿ ಫ್ಲೆಕ್ಸ್ಗಳಲ್ಲಿ ರಾರಾಜಿಸುತ್ತಿದೆ.ಆದರೆ ಶತಮಾನಗಳಿಂದಲೂ ಕಾಂಗ್ರೆಸ್ ಪರವಾಗಿ ನಿಂತ ಜಿಲ್ಲೆಯ ಯಾವ ಮಾಜಿ ಶಾಸಕರ ಫೋಟೋಗಳು ಕಾಂಗ್ರೆಸ್ ನ ಫ್ಲೆಕ್ಸ್ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅಥವ್ಸ ಪಕ್ಷದಿಂದ ನಿರ್ಲಕ್ಷö್ಯಕ್ಕೆ ಒಳಗಾದರೆ ಎಂಬ ಭಾವನೆ ಇನ್ನೂ ಕೆಲವು ಮಾಜಿ ಶಾಸಕರುಗಳ ಮನಸ್ಸಿನಲ್ಲಿ ಇಣುಕಿದಂತೆ ಕಾಣುತ್ತಿದೆ. ಇಂತಹ ವಾತಾವರಣ ನಿರ್ಮಾಣವಾಗಿರುವುದರಿಂದ ನಿಂಗಪ್ಪನವರ ಮನಸ್ಥಿತಿಯನ್ನು ಅರಿತ ಕೆಲವರಿಗೆ ಈ ಮೇಲ್ಕಂಡAತೆ ಅನಿಸಿರುವುದಂತೂ ಸತ್ಯ ಎಂಬ ಭಾವನೆ ಜಿಲ್ಲೆಯ ಜನತೆಯಲ್ಲಿ ಹರಿದಾಡುತ್ತಿದೆ.
ತಿಪಟೂರಿನಲ್ಲಿ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರು ಪರಿಪೂರ್ಣವಾಗಿ ಸಹಕರಿಸಿದರೂ ಕೂಡ ಲೋಕೇಶ್ವರ್ ಅವರ ಸಮುದಾಯದ ಪ್ರಭಾವ ಇಲ್ಲದ್ದಿಲ್ಲ ಎಂಬ ನಡೆಯನ್ನು ಕಾಂಗ್ರೆಸ್ನವರು ಅರಿಯಬೇಕಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪನವರ ಪ್ರಭಾವದಿಂದಲೇ ಬಿ.ಸಿ.ನಾಗೇಶ್ ಶಾಸಕರಾಗಿದ್ದು ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಈ ಮಾತುಗಳನ್ನು ಖುದ್ದು ಚಿ.ನಾ.ಹಳ್ಳಿಯ ಮಾಜಿ ಸಚಿವ ವರೇ ಹೇಳಿದ್ದಾರೆ. ಆದರೂ ಇದು ಲೋಕಸಭಾ ಚುನಾವಣೆ ಆದ್ದರಿಂದ ಮತದಾರರ ಮನಸ್ಥಿತಿಯನ್ನು ಅರಿಯುವುದು ತುಂಬಾ ಮುಖ್ಯವಾಗಿದೆ.
ತುರುವೇಕೆರೆಯಲ್ಲಿ ವಿಧಾನಸಭಾ ಅಭ್ಯರ್ಥಿ ಬೆಮೆಲ್ ಕಾಂತರಾಜು ಸಹ ಅಲ್ಲಿನ ಹಿಂದಿನ ಪರಾಜಿತ ಅಭ್ಯರ್ಥಿ ಗೀತಾರಾಜಣ್ಣ ರವರ ಪ್ರಭಾವ ಬಳಸುತ್ತದೆಯೋ ಇಲ್ಲವೋ ತಿಳಿಯದು ಆದರೆ ಬಿಜೆಪಿಯಲ್ಲಿ ಮಸಾಲ ಜಯರಾಮ್ ಬಿರುಸಿನ ಪ್ರಚಾರ ತೊಡಗಿದ್ದು ಮಾಜಿ ಸಚಿವ ಮಾಧುಸ್ವಾಮಿ ಮತ್ತು ಯಡಿಯೂರಪ್ಪನವರ ಸಂಧಾನ ಸಭೆ ನಡೆಸುವಲ್ಲಿ ಯಶಸ್ವಿಯಾದರು.ಜಾತ್ಯತೀತ ಜನತಾದಳದ ಶಾಸಕರು ಇರುವುದರಿಂದ ಎಂ.ಟಿ.ಕೃಷ್ಣಪ್ಪನವರು ಒಳ ಮನಸ್ಸು ಏನು ಹೇಳುತ್ತಿದೆ ಎಂದು ಅರಿಯಬೇಕಿದೆ.
ಗುಬ್ಬಿ ತಾಲೂಕಿನಲ್ಲಿ ಈಗಾಗಲೇ ಸೋಮಣ್ಣ ಅವರ ವಿರೋಧಿ ಬಣ ಎಂದು ಗುರುತಿಸಿಕೊಂಡಿರುವವರು ಯಡಿಯೂ ರಪ್ಪನವರ ಸಂಧಾನದಿAದ ಯಶಸ್ವಿ ಎಂದು ಭಾವಿಸಿದ್ದರೂ ಒಳ ಕೊಯ್ಲು ಆಗುವ ಸಂಭವ ಜಾಸ್ತಿ ಇದೆ. ಜನತಾದಳದ ಪರಾಜಿತ ಅಭ್ಯರ್ಥಿ ಚುನಾವಣೆಯ ನಂತರ ಈವರೆಗೂ ಕ್ಷೇತ್ರದಲ್ಲಿ ಕಂಡಿಲ್ಲ ಈಗ ಲೋಕಸಭಾ ಚುನಾವಣೆ ಇರುವುದರಿಂದ ಕ್ಷೇತ್ರ ವ್ಯಾಪ್ತಿ ಸಂಚರಿಸಿದ್ದಾರೆAದು ಕಾರ್ಯಕರ್ತರ ಅಭಿಪ್ರಾಯ . ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಸಂಪೂರ್ಣ ವಾತಾವರಣವಿದ್ದು, ಕಾಂಗ್ರೆಸ್ ಶಾಸಕರು ಇರುವುದರಿಂದ ಎಸ್.ಆರ್.ಶ್ರೀನಿವಾಸ( ವಾಸಣ್ಣ)ನವರು ಎಲ್ಲ ಸಮುದಾಯದ ಜನರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರೆ ಚಿತ್ರಣ ಬದಲಾಗುವುದು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿಗೆ ವಿಚಿತ್ರವಾಗಿ ತೋರುತ್ತಿದೆ.ಕಳೆದ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿದ್ದ ಮಾಜಿ ಶಾಸಕ ಗೌರಿಶಂಕರ್ ಈಗ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು ಸದ್ಯ ಸಂಘಟನೆಯಲ್ಲಿ ತೊಡಗಿದ್ದಾರೆ. ಆದರೆ ಜಾತ್ಯಾತೀತ ಜನತಾದಳದ ಮುಂದಿನ ನಾಯಕ ಯಾರು ಇಲ್ಲ ಎಂಬ ಭಾವನೆ ಇದ್ದ ಕಾರಣ ಜನತಾದಳದ ಕಾರ್ಯಕರ್ತರು ಸಂಪೂರ್ಣವಾಗಿ ವಲಸೆ ಬರುತ್ತಾರೆಂದು ಭಾವಿಸಲಾಗಿತ್ತು.ಆದರೆ ಈಗ ಚಿತ್ರಣವೇ ಬೇರೆ ಇದೆ .ಮಾಜಿ ಶಾಸಕ ಹೆಚ್.ನಿಂಗಪ್ಪನವರು ಜನತಾದಳ ಸೇರಿದ ನಂತರ ಜನತಾದಳದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದಂತೆ ಕಾಣುತ್ತಿದೆ. ನೆನ್ನೆ ದೇವೇಗೌಡರು ಭೇಟಿ ನೀಡಿದ ಸಂದರ್ಭದಲ್ಲಿ ನೆರೆದಿದ್ದ ಜನರ ಭಾವನೆಯನ್ನು ಕಂಡರೆ ಹಾಗೇನಿಸುತ್ತದೆ. ಬಿಜೆಪಿ ಶಾಸಕರು ಈ ಮೊದಲೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಗ್ರಾಮಾಂತರ ಕ್ಷೇತ್ರದ ಮತದಾರರು ಮುಂಬರುವ ತಮ್ಮ ನಾಯಕತ್ವದ ಹಾಗೂ ಪ್ರಸ್ತುತ ಚುನಾವಣೆಯ ಮೇಲೆ ನಿರ್ಧರಿಸುತ್ತಾರೋ ಎಂಬುದನ್ನು ಮನಗಾಣಬೇಕಿದೆ.
ತುಮಕೂರು ನಗರದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಮತಗಳನ್ನು ಪಡೆದ ಕಾಂಗ್ರೆಸ್ ಬಾರಿ ಇನ್ನು ಶ್ರಮಪಡಬಹುದೆಂಬ ಭಾವನೆ ಇದ್ದರೂ ಶಾಸಕ ಜ್ಯೋತಿ ಗಣೇಶ್ ಮತ್ತು ಸಂಸದ ಜಿಎಸ್ ಬಸವರಾಜ್ ಅವರು ಸೋಮಣ್ಣನವರ ಬೆನ್ನಿಗೆ ನಿಂತಿರುವುದರಿAದ ಹಾಗು ಅವರು ಅವರನ್ನೇ ನಂಬಿರುವುದರಿAದ ಯಾವ ರೀತಿ ಚುನಾವಣೆ ನಡೆಯಲಿದೆ ಎಂಬುದು ನಿರ್ಧರಿಸುವುದು ಜನರಿಗೆ ಬಿಟ್ಟಿದ್ದು . ಮೊನ್ನೆ ತಾನೇ ಜೆಡಿಎಸ್ ಪರಾಜಿತ ಅಭ್ಯರ್ಥಿ ಗೋವಿಂದರಾಜು ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂಬ ಸುದ್ದಿಯು ಇದ್ದು ಇದು ಎಷ್ಟರಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎಂಬುದು ಕಾದು ನೋಡಬೇಕು.
ಕೊರಟಗೆರೆ ಮಧುಗಿರಿ ಕ್ಷೇತ್ರಗಳ ವಿಚಾರವೇ ವಿಭಿನ್ನ.ಅಲ್ಲಿ ಬಿಜೆಪಿಗೆ ಮೂಲ ನೆಲೆ ಕಂಡುಕೊಳ್ಳಲು ಇನ್ನು ಸಾಧ್ಯವಾಗಿಲ್ಲ. ಕಾರಣ ಬಿಜೆಪಿ ಈ ಕ್ಷೇತ್ರಗಳನ್ನು ತನ್ನ ಪ್ರಯೋಗಾತ್ಮಕ ಕ್ಷೇತ್ರವನ್ನಾಗಿ ಗುರುತಿಸಿ ಕೊಂಡಿದೆ. ವಿನಃ ಸಂಘಟನಾತ್ಮಕವಾಗಿ ಮತ್ತು ಚುನಾವಣಾ ಗೆಲುವಿಗೋಸ್ಕರ ಎಂಬ ಭಾವನೆ ಇನ್ನೂ ಅಲ್ಲಿ ಮೂಡಿಲ್ಲ . ಹಾಗೂ ಕಾರ್ಯಕರ್ತರಲ್ಲಿ ಆ ಉತ್ಸಾಹಗಳು ಕಾಣ ಸಿಗುವುದಿಲ್ಲ . ಕಾರ್ಯಕರ್ತರು ಕೂಡ ಪಕ್ಷ ಬೆಳೆಸುವಲ್ಲಿ ಆಸಕ್ತಿ ತೋರದೆ ಬರೀ ತಮ್ಮ ಸ್ವಾರ್ಥ ನಡೆಗಳಿಂದಲೇ ಪಕ್ಷವನ್ನು ಅಧೋಗತಿಗೆ ತಲುಪಿಸುವಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಕಾಣದ ಕೈಗಳು ಎರಡು ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿರುತ್ತವೆ. ಆ ಕೈಗಳು ಯಾವಾಗ ಬರುತ್ತೋ ಯಾವಾಗ ಹೋಗುತ್ತವೋ ತಿಳಿಯುವುದಿಲ್ಲ. ಪ್ರತಿ ಚುನಾವಣೆಯಲ್ಲೂ ಜನ ಅಭಿಪ್ರಾಯದ ವಿರುದ್ಧ ಹೊಸ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರಿಂದ ಬಲಿಷ್ಠ ಸಂಘಟನೆ ಸೃಷ್ಟಿಸುವಲ್ಲಿ ವಿಫಲವಾಗಿ ರುವುದನ್ನು ನೋಡುತ್ತಿದ್ದೇವೆ.ಆದರೆ ಜನತಾದಳವು ಬಲಿಷ್ಠ ಆಗಿರುವ ಈ ಎರಡು ಕ್ಷೇತ್ರಗಳಲ್ಲಿ ಜನತಾದಳದ ಕಾರ್ಯಕರ್ತರು ಮತ್ತು ನಾಯಕರುಗಳು ಯಾವ ರೀತಿ ಚುನಾವಣಾ ಕಣದಲ್ಲಿ ಹೋರಾಡುತ್ತಾರೆ ನಿಲುವಿನ ಮೇಲೆ ಹಾಗೂ ಈ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ಅಥವಾ ಅಭ್ಯರ್ಥಿ ಹೇಗೆ ಬಳಸಿಕೊಳ್ಳಲಿದ್ದಾರೆ. ಮತ್ತೆ ಯಾವ್ಯಾವ ಸಮುದಾಯದ ಜನರಿಗೆ ಮುಂಚೂಣಿ ಚುನಾವಣಾ ನಿರ್ವಹಣೆಯನ್ನು ನಿರ್ವಹಿಸುವಲ್ಲಿ ಹೆಜ್ಜೆ ಇಡಲಿದೆ ಎಂಬುದರ ಮೇಲೆ ಫಲಿತಾಂಶದ ಒಳಹರಿವು ತಿಳಿಯಬಹುದು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸೇರಿದ ಕೆಲವರಿಗೆ ಸ್ವಲ್ಪ ಇರುಸು ಮುರಿಸು ಇರುವುದು ಕಾಣಸಿಗುತ್ತದೆ.ಆದರೂ ಅವರನ್ನೆಲ್ಲ ಮತ್ತೆ ಕೂಡಿಸಿಕೊಂಡಲ್ಲಿ ಯಶಸ್ಸಿನ ದಡ ಮುಟ್ಟಲು ಸಾಧ್ಯವಾಗಬಹುದು. ಇತ್ತೀಚಿನ ಬೆಳವಣಿಗೆಯಲ್ಲಿ ಕೊರಟಗೆರೆಯ ಗೊಲ್ಲ ಸಮುದಾಯದ ಮುಖಂಡ ಮಹಾಲಿಂಗಪ್ಪನವರನ್ನು(ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರೇಮ ಮಹಾಲಿಂಗಪ್ಪ ಅವರ ಪತಿ) ಕಾಂಗ್ರೆಸ್ ಸೇರ್ಪಡೆ ಆಗಿರುವುದು ಉತ್ತಮ ಬೆಳವಣಿಗೆ ಆದರೂ ಕಾಡುಗೊಲ್ಲ ಅಭಿವೃದ್ಧಿ ನಿಗಮದ ವಿಚಾರ ಆದಿ ಜಾಂಬವ ಅಭಿವೃದ್ಧಿ ನಿಗಮದ ವಿಚಾರ ನಿರ್ಧರಿಸುವಲ್ಲಿ ವಿಳಂಬ ಧೋರಣೆಸುತ್ತಿರುವುದು ಸ್ವಲ್ಪ ದುಬಾರಿಯಾಗಬಹುದು.
ಮೂಲತಃ ಎರಡು ಕ್ಷೇತ್ರಗಳಲ್ಲಿ ಮಾದಿಗ ಗೊಲ್ಲ ಕುರುಬ ಸಮುದಾಯಗಳು ಇದರ ಜೊತೆ ಒಕ್ಕಲಿಗ ಕುಂಚಿಟಿಗರ ಮನಸನ್ನು ಯಾರು ಸರಿಪಡಿಸಿಕೊಳ್ಳುತ್ತಾರೋ ಅವರ ಪರವಾಗಿ ಚುನಾವಣಾ ಫಲಿತಾಂಶ ಏರುಪೇರು ಆಗುವುದೆಂಬ ವಿಚಾರವನ್ನು ಜನಸಾಮಾನ್ಯರು ಮಾತನಾಡುವುದನ್ನು ಕ್ಷೇತ್ರ ಸಂಚಾರದಲ್ಲಿ ಅರಿತಿದ್ದೇನೆ.
ಬಿಜೆಪಿಯ ಸಂವಿಧಾನ ವಿರೋಧಿ ನಡೆಯನ್ನು ಸಮರ್ಥವಾಗಿ ಅಲ್ಲಗಳಲು ಮತ್ತು ಸಂವಿಧಾನ ಪರವಾಗಿದ್ದೇವೆ ಎಂದು ಸಮರ್ಥಿಸಲು ಮೊನ್ನೆ ಬಿಜೆಪಿಯ ಎಸ್ಸಿ ಘಟಕದ ವತಿಯಿಂದ ಮತ್ತೆ ಎಸ್ಸಿ ಎಸ್ಟಿ ಸಮುದಾಯಗಳಿಂದ ಪತ್ರಿಕಾಗೋಷ್ಠಿ ನಡೆಸಿ, ಸಂಸದ ಅನಂತ್ ಕುಮಾರ್ ಹೆಗಡೆಯ ಹೇಳಿಕೆಯನ್ನು ವಿರೋಧಿಸುವ ನಿಲುವು ಬಿಜೆಪಿಯಲ್ಲಿದೆ ಎಂಬ ಭಾವನೆಯನ್ನು ಮೂಡಿಸುವಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದು ಅದರ ಭಾಗವಾಗಿ ಸಮುದಾಯದ ಮುಖಂಡರೇ ಹೆಚ್ಚು ತೊಡಗಿಸಿಕೊಳ್ಳುವಂತೆ ನೋಡಿಕೊಂಡಿರುವುದರಲ್ಲಿ, ಬಿಜೆಪಿ ಯಶಕಂಡAತೆ ಭಾಸವಾಗುತ್ತಿದೆ.
ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕ ಮತ್ತು ಇತರೆ ಘಟಕಗಳು ಇನ್ನೂ ಹೊರಬಂದು ಚುನಾವಣಾ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಕಾಣುತ್ತಿಲ್ಲ. ಕಾಂಗ್ರೆಸ್ ಬಿಜೆಪಿಯ ಸಂವಿಧಾನ ವಿರೋಧಿ ಮತ್ತು ೫ ಗ್ಯಾರಂಟಿಗನ್ನೇ ನೆಚ್ಚಿದರೆ ಸಾಲದು ಎಲ್ಲಾ ಸಮುದಾಯದ ಮತ್ತು ಸಣ್ಣ ಪುಟ್ಟ ನಾಯಕರಗಳ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿದಲ್ಲಿ ಒಳಿತಾಗಬಹುದೇನೋ. ಹಾಗೂ ರಾಹುಲ್ ಗಾಂಧಿಯವರ ನ್ಯಾಯ ಯೋಜನೆಯ ಬಗ್ಗೆ ಪ್ರಚಾರ ಇಲ್ಲವೇ ಇಲ್ಲವೆಂಬAತೆ ಭಾಸವಾಗುತ್ತಿದೆ. ಬಿಜೆಪಿ ಈಗಾಗಲೇ ಸಣ್ಣಪುಟ್ಟ ನಾಯಕಗಳನ್ನ ವಿಚಾರಿಸುವಲ್ಲಿ ಮುಂಚೂಣಿಯಲ್ಲಿದ್ದು ಬಿಜೆಪಿ ಅಭ್ಯರ್ಥಿಯು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ವಿಧಾನಸಭಾ ಚುನಾವಣಾ ರೀತಿಯ ರಣತಂತ್ರವನ್ನು ರೂಪಿಸುತ್ತಿರುವುದರಲ್ಲಿ ಯಾವ ಸಂಶಯವೂ ಇಲ್ಲ . ರಾತ್ರಿ ಹಗಲೆನ್ನದೆ ಕ್ಷೇತ್ರ ವ್ಯಾಪ್ತಿ ಸಂಚಾರ ನಡೆಸುತ್ತಿದ್ದಾರೆ ಹಾಗೂ ಕಾರ್ಯಕರ್ತರು ಸಹ ಕ್ಷೇತ್ರ ವ್ಯಾಪ್ತಿಗಳಲ್ಲಿ ರಾಷ್ಟçಕಟ್ಟುವ ಕಾರ್ಯವೆಂಬAತೆ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ನಾನು ಕ್ಷೇತ್ರ ಸಂಚಾರದಲ್ಲಿ ಕಂಡ ದೃಶ್ಯವಿದು. ಮುದ್ದಹನುಮೇಗೌಡರು ಸಹ ಶ್ರವಮಹಿಸಬೇಕು. ನಾಮಪತ್ರ ಸಲ್ಲಿಸಲು ಇನ್ನೂ ಎರಡು ದಿನ ಬಾಕಿ ಇದ್ದು, ನೆಲಮಟ್ಟದ ಕಾರ್ಯಕರ್ತರ ಹಾಗೂ ನಾಯಕರ ಹಾಜರಾತಿಯ ಬಗ್ಗೆ ಹಾಗೂ ಪ್ರಚಾರದ ಭಾಗವಾಗಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗಬಹುದೆಂಬ ಭಾವನೆ ಕ್ಷೇತ್ರದ ಜನಸಾಮಾನ್ಯರಲ್ಲಿ ಮನೆ ಮಾತಾಗಿದೆ.
ಈ ಮೈತ್ರಿ ಹೀಗೆ ಮುಂದುವರೆದರೆ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಜೆ.ಡಿ.ಎಸ್. ಪಾಲಾಗಬಹುದು. ಮುಖ್ಯವಾಗಿ ಎರಡು ಪರಿಶಿಷ್ಟ ಜಾತಿಯ ಕ್ಷೇತ್ರಗಳು ಜೆಡಿಎಸ್ ಪ್ರಬಲವಾಗಿ ಒತ್ತಾಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
-ಮಾರುತಿ ಗಂಗಹನುಮಯ್ಯ
ಉಪ ಸಂಪಾದಕರು
ಅಮೃತವಾಣಿ ದಿನ ಪತ್ರಿಕೆ
ತುಮಕೂರು.