ನಮ್ಮಿಬ್ಬರಿಗೂ ದಿವಂಗತ ಕೆ.ಮಲ್ಲಣ್ಣ ಅವರೆ ಗುರುಗಳಾಗಿ ಮಾರ್ಗದರ್ಶಕರು: ಟಿ.ಬಿ.ಜಯಚಂದ್ರ
ತುಮಕೂರು, ಮಾ.6- ನಾನು ಮತ್ತು ಗಂಗಹನುಮಯ್ಯ ಅವರ ನಡುವೆ ಅವಿನಾಭಾವ ಸಂಬಂಧವಿದ್ದು, ಜೊತೆಯಲ್ಲೆ ಓದಿ ರಾಜಕೀಯ ಪ್ರವೇಶ ಮಾಡಿದ್ದು ನಮ್ಮಿಬ್ಬರಿಗೂ ದಿವಂಗತ ಕೆ.ಮಲ್ಲಣ್ಣ ಅವರೆ ಗುರುಗಳಾಗಿ ಮಾರ್ಗದರ್ಶನ ನೀಡಿದ್ದರು ಎಂದು ಮಾಜಿ ಸಚಿವ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಅಭಿಪ್ರಾಯಪಟ್ಟರು.
https://www.facebook.com/share/p/gg7jFTLnb1eRpJyX/?mibextid=oFDknk
ನಗರದ ಡಾ. ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆದ ಅಮೃತವಾಣಿ ಪತ್ರಿಕೆಯ ೪೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿ, 4೦ ವರ್ಷಗಳ ಕಾಲ ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ. ಸಾಕಷ್ಟು ಏಳು ಬೀಳುಗಳನ್ನು ಕಂಡು ಪತ್ರಿಕೆ ಬೆಳೆದುಬಂದಿದ್ದು, ಸಂಪಾದಕ ರಾದ ಗಂಗಹನುಮಯ್ಯ, ಉಪ ಸಂಪಾದಕರಾದ ಕಮಲಗಂಗಹನುಮಯ್ಯ ಮತ್ತು ಅವರ ಸಹಪಾಠಿಗಳು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಕಾಲೇಜು ದಿನಗಳಲ್ಲಿ ಗಂಗ ಹನುಮಯ್ಯನವರು ಎನ್ಸಿಸಿ ಸೇರಿ ಶಿಸ್ತು ಬದ್ಧ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆದು ಬಂದಿದ್ದು, ರಾಜಕೀಯ ಪ್ರವೇಶ ಮಾಡಿ 2 ಬಾರಿ ಶಾಸಕರಾಗಿ ಯಾವುದೆ ರೀತಿಯ ರಾಗ ದ್ವೇಷವಿಲ್ಲದೆ ಉತ್ತಮವಾಗಿ ಮತ್ತು ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಅಧಿಕಾರ ಇಲ್ಲದಿದ್ದರೂ ಜನಮನ್ನಣೆ ಅಪಾರವಾಗಿದೆ. ಕಮಲಗಂಹನುಮಯ್ಯ ನವರು ಸಹ ಜಿ.ಪಂ. ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ ಎಂದರು.
ಪತ್ರಿಕಾ ಮಾಧ್ಯಮ ಕಷ್ಟದ ಕೆಲಸ. ಗೌರಿಲಂಕೇಶ್ ಅವರು ಅನೇಕ ವಿಚಾರ ಧಾರೆಗಳನ್ನು ನನ್ನೊಂದಿಗೆ ಹಂಚಿ ಕೊಳ್ಳುತ್ತಿದ್ದರು. ಎಲ್ಲಾ ವಿಷಯಗಳನ್ನು ಪರಾಮರ್ಶಿಸಿ ಸತ್ಯವನ್ನು ಬರೆಯುತ್ತಿದ್ದರು. ಅನೇಕ ಜನ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಪ್ರಾಣ ಕೊಟ್ಟು ಬಲಿದಾನ ಮಾಡಿದ ಅನೇಕ ನಿದರ್ಶನಗಳಿವೆ. ಪತ್ರಿಕೆ ನಡೆಸುವುದು ಸವಾಲಿನ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾ ರಂಗ ದೊಡ್ಡ ಕ್ಷೇತ್ರ ಇದರಲ್ಲಿ ಯಶಸ್ಸು ಗಳಿಸಲು ಸಾಕಷ್ಟು ಶ್ರಮ ಅಗತ್ಯ ಅನೇಕ ದ್ವೇಶ, ಒತ್ತಡ, ಜಾತಿ, ಭಾಷೆ ಅಡ್ಡಿ ಬರುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ೪೦ ವರ್ಷ ಈ ಪತ್ರಿಕೆ ಬೆಳೆದಿರುವುದು ಅಭಿನಂದನೀಯ ಎಂದರು.
ಪತ್ರಿಕಾ ಮಾಧ್ಯಮವನ್ನು ಜನ ಹೆಚ್ಚು ನಂಬುತ್ತಾರೆ. ಇದಕ್ಕೆ ನಿದರ್ಶನ ಇತ್ತೀಚೆ ಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಬೆಂಬಲಿಗರು ಘೋಷಣೆ ಕೂಗಿದ್ದು ದೊಡ್ಡ ವಿವಾದವಾಗಿ ಚರ್ಚೆಗೆ ಗ್ರಾಸವಾಗಿದೆ ಎಂದರು.