ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಟಿ ಜೆ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಕಾಯಿದೆ 2023 ರ ಪ್ರಕಾರ ಪ್ರಮುಖ ತಿದ್ದುಪಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ, ಉದ್ಯಮಗಳ ಅಭಿವೃದ್ಧಿ ಕಾಯಿದೆ 2006ರ ಹಾಗೂ income tax sec 43B(h) ಈ ಆಕ್ಟ್ ನ ಪ್ರಮುಖ ವಿಚಾರಗಳ ಬಗ್ಗೆ ಚಾರ್ಟೆಡ್ ಅಕೌಂಟೆಂಟ್ ರಾದ CA ನವೀನ್ ಖಾರಿವಾಲ್ ಬೆಂಗಳೂರು ರವರು ಟಿಡಿಸಿಸಿಐ ಸಂಸ್ಥೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾಹಿತಿಯನ್ನು ತಿಳಿಸಿದರು , ಈ ಸಂದರ್ಭದಲ್ಲಿ ತುಮಕೂರು ಸಿಎ ಅಸೋಸಿಯೇಷನ್ ಅಧ್ಯಕ್ಷರಾದ ವಿಶ್ವನಾಥ್ ರವರು, ತುಮಕೂರು ಜಿಲ್ಲೆ ಸಿಎ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಅಂಜಿನಪ್ಪನವರು, ಸಂಸ್ಥೆಯ ಉಪಾಧ್ಯಕ್ಷರಾದ ಟಿಟಿ ಸತ್ಯನಾರಾಯಣ, ಕಾರ್ಯದರ್ಶಿಗಳಾದ ಡಿ ಆರ್ ಮಲ್ಲೇಶಯ್ಯ, ಜಂಟಿ ಕಾರ್ಯದರ್ಶಿಗಳಾದ ಕುರಂದ್ ವಾಡ್ ಹಾಗೂ ಸಂಸ್ಥೆಯ ನಿರ್ದೇಶಕರು, ಮಾಜಿ ಅಧ್ಯಕ್ಷರು, ವಿಶೇಷ ಆಹ್ವಾನಿತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲೆಯ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇತರರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ ಸದುಪಯೋಗವನ್ನು ಪಡೆದುಕೊಂಡರು ಎಂದು ಡಿ ಆರ್ ಮಲ್ಲೇಶಯ್ಯ ಕಾರ್ಯದರ್ಶಿಗಳು ಟಿ ಡಿ ಸಿ ಸಿ ಐ ತುಮಕೂರು ಇವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದರೆ.