ಮಧುಗಿರಿ:-:ಎಲ್ಲರೂ ಗಣಪತಿಯನ್ನು ನಿತ್ಯವೂ ಪೂಜೆ ಮಾಡುತ್ತಾರೆ .ಆದರೆ ಭಾದ್ರಪ್ರದ ಮಾಸದಲ್ಲಿ ಪ್ರತಿಷ್ಠಾಪಿಸುವಂತಹ ಗಣಪತಿಗೆ ಹೆಚ್ಚು ಮಹತ್ವ ಮತ್ತು ಶಕ್ತಿಯಿರಲಿದ್ದು ಎಲ್ಲರ ಇಷ್ಟಾರ್ಥಗಳನ್ನು ಗಣಪತಿಯು ಈಡೇರಿಸುತ್ತಾನೆ ಎನ್ನುವ ಪ್ರತೀತಿ ಇದೆ ಎಂದು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಪಟ್ಟಣದ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಮಧ್ಯಭಾಗದಲ್ಲಿ ಶ್ರೀ ವಿದ್ಯಾ ಗಣಪತಿ ಮಹಾಮಂಡಳಿ ವತಿಯಿಂದ ಬಾಲಗಂಗಾಧರ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ವಿದ್ಯಾ ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನುವಹಿಸಿ ಅರ್ಶಿವಚನ ನೀಡಿದರು.
ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಹಾಗೂ ಕೋಮು ಸೌಹಾರ್ದ ಸಂಕೇತವಾಗಿ ಈ ಗಣೇಶ ಆಚರಣೆ ನಡೆಯುತ್ತಿರುವುದು ಉತ್ತಮವಾದ ನಡೆ ಎಂದು ತಿಳಿಸಿದರು.
ಮಧುಗಿರಿ ತಾಲೂಕಿನ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ಪೀಠಾಧ್ಯಕ್ಷ ಸ್ವಾಮಿ ರಮಾನಂದ ಚೈತನ್ಯ ಮಾತಾನಾಡಿ,ಎಲ್ಲಾ ಧರ್ಮದವರಿಗೂ ಧರ್ಮ ಬೇಕಾಗಿದೆ. ಎಲ್ಲರೂ ಅವರ ಧರ್ಮದ ಆಚರಣೆ ಮತ್ತು ಸಂಕೇತಗಳನ್ನು ಬಳಸುತ್ತಾರೆ ಆದರೆ ಹಿಂದೂ ಧರ್ಮದವರು ಎಲ್ಲವನ್ನು ಬಿಡುತ್ತಿರುವುದು ವಿಷಾದನೀಯ,ನಮ್ಮ ಧರ್ಮದ ಆಚರಣೆ ಪದ್ಧತಿಗಳನ್ನು ಬಿಡಬಾರದು, ಮುಸ್ಲಿಮರು ಟೋಪಿಯನ್ನು ಧರಿಸುತ್ತಾರೆ,ಕ್ರೈಸ್ತರು ಶಿಲಬೆಯನ್ನು ಧರಿಸುತ್ತಾರೆ ಆದರೆ ಹಿಂದೂಗಳು ನಮ್ಮ ಧರ್ಮದ ಸಂಕೇತವಾಗಿರುವ ತಿಲಕ ಮತ್ತು ವಿಭೂತಿಗಳನ್ನು ಧರಿಸುವುದನ್ನು ಬಿಡುತ್ತಿದ್ದು ನಾವು ಯಾವ ಧರ್ಮಕ್ಕೆ ಸೇರುತ್ತೇವೆ ಎನ್ನುವುದನ್ನು ಪ್ರಶ್ನಿಸುವಂತಿದೆ ಎಂದೆಳಿ, ಭಾರತದ ಸಂಸ್ಕೃತಿಯನ್ನು ಪಾಶ್ಚಾತ್ಯ ದೇಶಗಳಲ್ಲಿ ಅನುಸರಿಸುತ್ತಿದ್ದು ನಮ್ಮ ದೇಶದ ಸಂಸ್ಕೃತಿಯನ್ನು ನಾವೇ ಮರೆಯುತ್ತಿದ್ದೇವೆ ಎಂದು ತಿಳಿಸಿದರು.
ಈ ವಿದ್ಯಾ ಗಣಪತಿಯನ್ನು ಹರಿಹರ ಸಂಗಮದ ಮಧ್ಯಭಾಗದ ಹಾಗೂ ಎದುರುಗಡೆ ಇರುವ ಅಶ್ವಥ್ ನಾರಾಯಣ ಪವಿತ್ರವಾದ ಸ್ಥಳದಲ್ಲಿ ಸ್ಥಾಪಿಸಿರುವುದು ಲೋಕಕಲ್ಯಾಣಾರ್ಥ ಉತ್ತಮ ಕೆಲಸವೆಂದು ತಿಳಿಸಿದರು.
ಧಾರ್ಮಿಕ ಮುಖಂಡ ಡಾ. ಎಂ. ಜಿ. ಶ್ರೀನಿವಾಸ್ ಮೂರ್ತಿ ,ಸಿಪಿಐ ಹನುಮಂತರಾಯಪ್ಪ,ಪಿಎಸ್ಐ ವಿಜಯಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ .ವಿ. ಗೋವಿಂದರಾಜು, ಕೆ .ಪ್ರಕಾಶ್, ಮಹಮದ್ ಆಯುಬ್ ,ಸದಸ್ಯರುಗಳಾದ ಕೆ. ನಾರಾಯಣ್, ಮಂಜುನಾಥ್ ಆಚಾರ್, ಲಾಲಪೇಟೆ ಮಂಜುನಾಥ್ ,ಎಂ ಎಸ್ ಚಂದ್ರಶೇಖರ ಬಾಬು ,ಎಂ.ಎಸ್. ಚಂದ್ರಶೇಖರ್, ಮಾಜಿ ಸದಸ್ಯರುಗಳಾದ ಅರ್.ಎಲ್.ಎಸ್.ರಮೇಶ್,ಶ್ರೀನಿವಾಸಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ, ಶ್ರೀ ವಿದ್ಯಾ ಗಣಪತಿ ಮಂಡಳಿಯ ಎಸ್ ವಿ ಎಲ್ ಶ್ರೀಧರ್ ,ಕೆ .ವಿ. ಮಂಜುನಾಥ ಗುಪ್ತ ,ಜಿ .ಆರ್. ಧನಪಾಲ್, ಧೋಲಿಬಾಬು, ಕಿಶೋರ್, ಜಿ. ನಾರಾಯಣ ರಾಜು, ಲಂಬು ಮಂಜುನಾಥ್ ,ಮಲೆ ರಂಗಪ್ಪ ,ರಘು ಯಾದವ್ , ಬಿ.ಆರ್.ಸತ್ಯನಾರಾಯಣ, ಯತೀಶ್ ಬಾಬು, ಕೆ.ಎಸ್ .ಪಾಂಡುರಂಗ ರೆಡ್ಡಿ, ಮೂಡ್ಲಗಿರೀಶ್, ಖಾಸಗಿ ವಿದ್ಯಾ ಸಂಸ್ಥೆ ಭಾಸ್ಕರ್ ರೆಡ್ಡಿ, ಮುಖಂಡರಾದ ಎಸ್ ಬಿ ಟಿ ರಾಮು ಆನಂದ ಕೃಷ್ಣ ಎಸ್ ಮೋಹನ್
ಪ್ರಧಾನ ಅರ್ಚಕರುಗಳಾದ ನಟರಾಜ ದೀಕ್ಷಿತ್, ಅನಂತ ಪದ್ಮನಾಭ ಭಟ್ಟರು, ಅಶ್ವಥ್ ಶರ್ಮ, ರಾಮಚಂದ್ರರಾವ್ ಇತರರು ಇದ್ದರು.