ತಿಪಟೂರು : ವಿಶ್ವ ಕ್ಷೌರಿಕರ ದಿನಾಚರಣೆಯ ಪ್ರಯುಕ್ತ ತಿಪಟೂರು ತಾಲ್ಲೂಕು ಸವಿತಾ ಸಮಾಜ ಹಾಗೂ ತಿಪಟೂರು ಸವಿತಾ ಸಮಾಜ ಯುವ ಪಡೆಯ ವತಿಯಿಂದ ದಿನಾಂಕ 19-09-2023 ರ ಮಂಗಳವಾರ ರಂದು ತಾಲ್ಲೂಕಿನ ಗೆದ್ಲೇಹಳ್ಳಿ ಗ್ರಾಮದ ವಿಕಲಚೇತನ ನಾಗರಾಜು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಸ್ವಾವಲಂಭಿ ಜೀವನ ನಡೆಸುತ್ತಿರುವ ಇವರಿಗೆ ವಿಶ್ವ ಕ್ಷೌರಿಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಯಾದ ವಿಜಯಕುಮಾರ್ ,ಮಾತನಾಡುತ್ತ, ಮೂಲ ಕ್ಷೌರಿಕರಾದ ನಾವುಗಳು ಕೇವಲ ಕ್ಷೌರಿಕರಾಗಿರಲಿಲ್ಲ,ಗಾಯಗಳಿಗೆ ಔಷಧಿ ಹಚ್ಚುವುದು,ದಂತಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು,ಹೀಗೆ ಹಲವು ಪಾರಂಪರಿಕ ವೈದ್ಯಕೀಯ ಪದ್ದತಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೆವು, 1096. ರಲ್ಲಿ ಫ್ರಾನ್ಸ್ ದೇಶದಲ್ಲಿ ಕ್ಷೌರಿಕರ ವೈದ್ಯಕೀಯ ಸಂಘವನ್ನು ಪ್ರಾರಂಭಿಸಿದ್ದಾರೆ, ಅದರ ನೆನಪಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ ಮಾಹೆಯಲ್ಲಿ ವಿಶ್ವ ಕ್ಷೌರಿಕರ ದಿನವನ್ನಾಗಿ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ಯುವ ಪಡೆಯ ಅಧ್ಯಕ್ಷ ವರದರಾಜು,ಉಪಾಧ್ಯಕ್ಷ ಎನ್.ಕೆ.ಲೋಕೇಶ್ ,ಪದಾಧಿಕಾರಿಗಳಾದ ಗೋಪಿ,ನವೀನ್,ರಾಮು, ಟಿ.ಎಂ.ರವಿ. ಪ್ರವೀಣ್.ರಮೇಶ್,ಶಿವು, ರವಿಕುಮಾರ್,ಸುಧಾಕರ್, ಮಾರುತಿ,ಮೋಹನ್ ಇದ್ದರು.