ಮೃತ ಅರ್ಚಕ ಸತ್ಯನಾರಾಯಣ್ ಕುಟುಂಬಕ್ಕೆ ಬ್ರಾಹ್ಮಣ ಸಮಾಜದಿಂದ ನಿಧಿ ಸಮರ್ಪಣೆ

ತುರುವೇಕೆರೆ: ಇತ್ತೀಚೆಗೆ ನಿಧನರಾದ ಅರ್ಚಕ ಸತ್ಯನಾರಾಯಣ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕು ಬ್ರಾಹ್ಮಣ ಸಮಾಜವು ಸಂತಾಪ ಸೂಚಿಸಿ, ಬಾಂದವರ ಸಹಕಾರದೊಂದಿಗೆ ಮೃತರ ಕುಟುಂಬಕ್ಕೆ 55 ಸಾವಿರ ರೂಗಳ ನಿಧಿಯನ್ನು ಸಮರ್ಪಿಸಿತು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಆರ್. ಸತ್ಯನಾರಾಯಣ್, ಮಾಜಿ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ಸಮಾಜದ ಖಜಾಂಚಿ ಕೆ. ಸತ್ಯನಾರಾಯಣ್ ಮೃತ ಅರ್ಚಕ ಸತ್ಯನಾರಾಯಣ್ ಅವರ ಪುತ್ರನಿಗೆ ನಿಧಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷ ಟಿ.ವಿ.ರಂಗನಾಥ್, ಉಪಾಧ್ಯಕ್ಷ ಡಾ.ಎ. ನಾಗರಾಜ್, ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಟಿ.ಎನ್. ರಘು, ನಂಜುಂಡಸ್ವಾಮಿ (ಬಾಬು), ಟಿ.ಆರ್. ನಂಜುಂಡಸ್ವಾಮಿ, ಶ್ರೀನಿವಾಸ್ (ಬ್ಯಾಂಕ್), ಶ್ರೀನಿವಾಸ್(ಪ್ರೆಸ್), ಪ್ರಾಣೇಶ್, ಗಿರೀಶ್ ಕೆ ಭಟ್, ಶ್ರೀಧರ ಪಂಡಿತ್, ಗುರುಪ್ರಸಾದ್, ವಿಶ್ವನಾಥ್, ಟಿ.ಎಸ್. ರಾಘವೇಂದ್ರ ಸೇರಿದಂತೆ ಸಮಾಜದ ಬಾಂದವರು, ವಿಪ್ರ ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ