ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಪ್ರತಿವರ್ಷವೂ ಸಂಘಕ್ಕೆ 25 ಲಕ್ಷ ನೀಡುವುದಾಗಿ ಆಶ್ವಾಸನೆ ನೀಡಿದರು.
ಕೊರಟಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಇಂದು ಕನ್ನಡ ನುಡಿನಮನ, ಪತ್ರಿಕಾ ದಿನಾಚರಣೆ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರಿಗೆ ಹೃದಯ ಪೂರ್ವಕ ಕೃತಜ್ಞತೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಹಾಗೂ ಸಾಧಕಿಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದು, ಇತ್ತೀಚಿಗೆ ಜಿಲ್ಲೆಯ ಪತ್ರಿಕಾ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿ ವರ್ಷ ೧ಲಕ್ಷ ರೂಗಳಂತೆ ೨೫ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಆಶ್ವಾಸನೆ ನೀಡಿದ್ದರು, ಗೃಹ ಸಚಿವ ಡಾ.ಜಿ ಪರಮೇಶ್ವರ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದ್ದು ಅದರೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ನುಡಿನಮನ, ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮವನ್ನು ಸಚಿವ ಡಾ.ಜಿ ಪರಮೇಶ್ವರವರು ಉದ್ಘಾಟಿಸಿ ಮಾತನಾಡಿದ ಅವರು,ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ರವರಿಗೆ ಗೌರವ ನಮನ ಸಲ್ಲಿಸಿದರು
ಈ ದಿನ ಕೊರಟಗೆರೆ ತಾಲೂಕಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕನ್ನಡ ನುಡಿ ನಮನ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಚಾರ. ಪತ್ರಿಕೋದ್ಯಮ ಎನ್ನುವುದು ಎಲ್ಲಿ ಪ್ರಜಾಪ್ರಭುತ್ವ ಇದೆ ಅಲ್ಲಿ ಪ್ರಜಾಪ್ರಭುತ್ವದ ಒಂದು ಭಾಗ ಈ ನಾಲ್ಕು ಕಂಬಗಳಲ್ಲಿ ಒಂದು ಸರಿ ಇಲ್ಲದಿದ್ದರೆ ಆ ಪ್ರಜಾಪ್ರಭುತ್ವ ಗೊಂದಲದಲ್ಲಿ ಸಿಲುಕುತ್ತದೆ ಪತ್ರಿಕೋದ್ಯಮ ಹಾಗೂ ಮಾಧ್ಯಮ ಕ್ಷೇತ್ರದ ಶಕ್ತಿ ಸಮಾಜವನ್ನು ತಿದ್ದುವಂತಹದ್ದು ಆದ್ದರಿಂದ ಆಧುನಿಕ ಕಾಲದಲ್ಲಿ ಪತ್ರಿಕೋದ್ಯಮಕ್ಕೆ ವಿಶೇಷ ಶಕ್ತಿ ಇದೆ. ರಾಜಕಾರಣಿಗಳು ಚುನಾವಣೆಯ ಸಂಧರ್ಭದಲ್ಲಿ ಮಾತನಾಡುವ ವಿಚಾರ ವಸ್ತು ನಿಷ್ಟವಾದರೂ ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಭಿಪ್ರಾಯ ಜನರ ಮನಸ್ಸನ್ನು ಗ್ರಹಿಸುವ ಶಕ್ತಿಯನ್ನು ಪತ್ರಿಕೋದ್ಯಮಕ್ಕೆ ಇದೆ. ಸಾಮಾಜಿಕ ಜಾಲತಾಣ ಮಾದ್ಯಮಗಳು ಡಿ. ಫೇಕ್ ಸುದ್ಧಿಗಳು ಹರಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು ಇದು ನಿಲ್ಲುವಂತಾಗಬೇಕು ಇಲ್ಲದೇ ಮಾದ್ಯಮ ಕ್ಷೇತ್ರಕ್ಕೆ ಆಹಾಕಾರ ಉಂಟಾಗುತ್ತದೆ ಎಂದರು.
ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಪ್ರತಿವರ್ಷವೂ ಸಂಘಕ್ಕೆ 25 ಲಕ್ಷ ನೀಡುವುದಾಗಿ ಆಶ್ವಾಸನೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿನಿ ಪುರುಷೋತ್ತಮ್ ಪ್ರಸ್ತಾವಿಕ ನುಡಿಗಳನ್ನಾಡಿದರು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಇಓ ಜೆ.ಪ್ರಭು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ವಿ ಆಶೋಕ್, ಹಾಜರಿದ್ದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್, ತಾ.ಪಂ ಇಓ ಅಪೂರ್ವ, ಕಾಂಗ್ರೆಸ್ ಮುಖಂಡರಾದ ಎ.ಡಿ ಬಲರಾಮಯ್ಯ, ಅರಕೆರೆ ಶಂಖರ್, ಕೊಡ್ಲಹಳ್ಳಿ ಅಶ್ವತ್ ನಾರಾಯಣ, ವಾಲೆ ಚಂದ್ರಯ್ಯ, ಹುಲಿಕುಂಟೆ ಪ್ರಸಾದ್, ಚಂದ್ರಶೇಖರ್ ಗೌಡ, ಎಂ.ಎನ್.ಜೆ ಮಂಜುನಾಥ್, ಪತ್ರಕರ್ತರುಗಳಾದ ಕೆ.ವಿ ಪುರುಷೋತ್ತಮ್, ಚಿದಂಬರ, ರಾಘವೆಂದ್ರ, ರಂಗಧಾಮಯ್ಯ, ನವೀನ್, ದೇವರಾಜು, ನಾಗರಾಜು, ಎನ್ ಮೂರ್ತಿ, ರಾಜು, ಅರುಣ್, ಸತೀಶ್, ಲಕ್ಷ್ಮೀಶ, ಮೂರ್ತಿ, ಲಕ್ಷ್ಮೀಕಾಂತ, ವಿಜಯಶಂಖರ್ , ಬಾಬು, ನಾಗೇಂದ್ರ, ಪದ್ಮರಾಜು, ಚಿಕ್ಕಕಾಮಯ್ಯ, ಮುಂತಾದವರು ಉಪಸ್ಥಿತರಿದ್ದರು.
ವರದಿ : ನವೀನ ಕುಮಾರ್, ಕೊರಟಗೆರೆ.