ಜೇನುತುಪ್ಪದ ಅಭಿಷೇಕಕ್ಕೆ ವರ ಕೊಡುವ ಕಮಂಡಲ ಗಣಪ
ಶ್ರೀ ಸುಧೀರ್ ಕುಮಾರ್ ಮುರೊಳ್ಳಿ ಅವರ ಜೊತೆ
ಬಹಳ ದಿನಗಳ ನಂತರ ಒಂದು ಚಿಕ್ಕ ಪ್ರವಾಸದ ಕಾಲ ಕೂಡಿಬಂತು ಅಂದರೆ ಸಕಲೇಶಪುರ ಪ್ರವಾಸ ಮುಗಿಸಿದ ನಂತರ ಯಾವ ಪ್ರವಾಸವನ್ನು ಕೈಗೊಂಡಿರಲಿಲ್ಲ.
ಈ ಪ್ರವಾಸದ ಉದ್ದೇಶ ಏನು ಇರಲಿಲ್ಲ ಬಹಳ ದಿನಗಳಿಂದ ಮನಸ್ಸಿನಲ್ಲಿ ಕಮಂಡಲ ಗಣಪತಿ ದೇವಸ್ಥಾನವನ್ನು ನೋಡಬೇಕೆಂಬ ಬಯಕೆ ಇತ್ತು ಹಾಗೂ ಮಕ್ಕಳಿಗೆ ಪರೀಕ್ಷೆ ಸಮಯವಾದುದರಿಂದ ಅವರಿಗೂ ಸಹ ಗಣಪತಿ ಆಶೀರ್ವಾದ ಸಿಗಲಿ ಎಂಬ ಭಾವನೆ ಇತ್ತು.
ದಿನಾಂಕ 30/11/ 2024 ಶನಿವಾರ ಸಮಯ 03:30ಕೆ ತುಮಕೂರು ನಗರವನ್ನು ನಮ್ಮ ಕಾರಿನಲ್ಲೇ ನಾನು ನನ್ನ ಕುಟುಂಬ ಮತ್ತು ಮಕ್ಕಳ ಸಮೇತ ಪ್ರವಾಸವನ್ನು ಪ್ರಾರಂಭಿಸಿದೆವು.

ಮೊದಲಿಗೆ ಹಿರಿಯೂರು ಮುಖಾಂತರ ಕೊಪ್ಪಗೆ ಹೋಗುವುದೆಂದು ನಂತರ ಬೆಂಗಳೂರು- ಹೊನ್ನಾವರ ರಸ್ತೆಯ ಕಾಮಗಾರಿಯನ್ನು ಮತ್ತು ಅದರ ಪ್ರಗತಿಯನ್ನು ಕಾಣುವ ಸಲುವಾಗಿ ಬಿ.ಹೆಚ್. ರಸ್ತೆ ಮೂಲಕ ತರೀಕೆರೆ ತಲುಪಿ ತರೀಕೆರೆಯಿಂದ ಕೊಪ್ಪಗೆ ಪ್ರಯಾಣ ಮಾಡುವುದೆಂದು ತೀರ್ಮಾನಿಸಿ ಬಿ. ಎಚ್. ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು, ಅರಸೀಕೆರೆ ಬೈಪಾಸ್ ಬಿಟ್ಟರೆ ಯಾವ ಬೈಪಾಸು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ ಕೆಲವು ಭಾಗಗಳಲ್ಲಿ ಅಂದರೆ ಸುಮಾರು 60 ಕಿಲೋಮೀಟರುಗಳ ಕಾಮಗಾರಿ ಪೂರೈಸಿದ್ದಾರೆ 2 ಟೋಲ್ ಗೇಟ್ಗಳನ್ನು ಅಳವಡಿಸಿದ್ದಾರೆ ಉಳಿದಂತೆ 120 ಕೀಮಿ ತರೀಕೆರೆ ವ್ಯಾಪ್ತಿಯವರೆಗೆ ಕಾಮಗಾರಿ ಕುಂಟುತಲೆ ಸಾಗಿದೆ ಅಥವಾ ಅಲ್ಲಲ್ಲೇ ಸಂಪೂರ್ಣ ನಿಂತು ಹೋಗಿದೆ.
ತರೀಕೆರೆಯ ಅರಮನೆ ಹೋಟೆಲ್ ನಲ್ಲಿ ಸಂಜೆ ಕಾಫಿ ಕುಡಿದು ೫ ಗಂಟೆಗಳ ಪ್ರಯಾಣದ ನಂತರ ಕೊಪ್ಪ ತಲುಪಿದೆವು.
ಮೊದಲೇ ನಿರ್ಧರಿಸಿದಂತೆ ಅಲ್ಲಿನ ಗುತ್ತಿ ಕಂಫರ್ಟ್ ವಸತಿ ಗೃಹದಲ್ಲಿ ವಾಸ್ತವ್ಯ ಉಡಿದೆವು ರಾತ್ರಿಯ ಊಟಕ್ಕೆ ವಸತಿಗೃಹದ ಮ್ಯಾನೇಜರ್ಅನ್ನು ವಿಚಾರಿಸಿದಾಗ ಆತ ವೆಜ್ ಆದರೆ ಶ್ರೀ ಗಜಾನನ ಭವನ ಹೋಗಿ ಅಥವಾ ನಾನ್ ವೆಜ್ ಆದರೆ ಬದ್ರಿಯಾ ಹೋಟೆಲ್ ಗೆ ಹೋಗಿ ಎಂದು ಸಲಹೆ ಕೊಟ್ಟನು ನಾವು ನಾನ್-ವೆಜ್ ಪ್ರಿಯರಾದರಿಂದ ಬದ್ರಿಯಾ ಹೋಟೆಲ್ ಗೆ ಪ್ರವೇಶ ಪಡೆದೆವು ಇಂಥ ಸಣ್ಣ ಪಟ್ಟಣದಲ್ಲಿ ನಾನ್ ವೆಚ್ ಚೆನ್ನಾಗಿರುತ್ತದೋ, ಇಲ್ಲವೋ ಎಂಬ ಅನುಮಾನದೊಂದಿಗೆ ಹೋಳ ಹೊಕ್ಕೆವು ಅದರ ಬೋರ್ಡ್ ನೋಡಿ ಸ್ವಲ್ಪ ಕುತೂಹಲ ಜಾಸ್ತಿ ಆಯಿತು ಕಾರಣ 1960 ರಿಂದ ನಡೆದು ಬಂದ ಹೋಟೆಲ್ ಎಂದು ತಿಳಿದು ಇಂದಿಗೆ ಮೂರನೇ ತಲೆ ಮಾರಿನವರು ಆ ಹೋಟೆಲ್ನನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಆಶ್ಚರ್ಯವಾಯಿತು.
ಅದರ ಮಾಲೀಕರಾದ ಬದ್ರಯ ಅಹಮದ್ ರವರ ಪರಿಚಯ ಆಯಿತು ಮತ್ತು ರುಚಿ ಶುಚಿಯು ಸಹ ಬಹಳ ಚೆನ್ನಾಗಿತ್ತು ಊಟವನ್ನು ಮನಪೂರ್ವಕವಾಗಿ ಸವಿದೆವು.
ಬೆಳಿಗ್ಗೆ ಆರು ಮೂವತ್ತಕ್ಕೆ ಸಿದ್ಧವಾಗಿ ಕಮಂಡಲ ಗಣಪತಿಗೆ ದರ್ಶನಕ್ಕೆ ಸಿದ್ಧವಾದವು, 10 ನಿಮಿಷದ ಹಾದಿ ನಾವು ದೇವಸ್ಥಾನವನ್ನು ಸೇರಿದೆವು.
ಇದು ಕೊಪ್ಪ ತಾಲೂಕಿನ ಕೆಸವೆ ಗ್ರಾಮದ ಸಿದ್ದರಮಠ ರಸ್ತೆಯಲ್ಲಿದೆ. ಕೊಪ್ಪವು ಸಹ್ಯಾದ್ರಿ ಬೆಟ್ಟಗಳಿಂದ ಸುತ್ತುವರಿದಿದೆ ಮತ್ತು ಸಮುದ್ರ ಮಟ್ಟದಿಂದ 763 ಮೀಟರ್ ಎತ್ತರದಲ್ಲಿದೆ, ಆಹ್ಲಾದಕರ ಹವಾಮಾನ ಮತ್ತು ಸುಂದರ ಪ್ರಶಾಂತ ವಾತಾವರಣ ಸುತ್ತಲೂ ಕಡಿದಾದ ಕಾಡು ದಟ್ಟಾರಣ್ಯ ನಡುವೆ ಒಂದು ಪುಟ್ಟ ದೇವಾಲಯ ದೇವಾಲಯದ ಪರಂಗಣದಿAದ ಹರಿದು ಬರುವ ನೀರು ಔಷಧಿಯುಕ್ತ ಮತ್ತು ಖನಿಜ ಯುಕ್ತ ನೀರು ಒಂದು ಕೊಳವೆ ಮೂಲಕ ಮುಂದಿನ ಸ್ನಾನಘಟ್ಟವನ್ನು ತಲುಪುತ್ತು ನಾವು ಮುಂಚೆ ಸ್ನಾನ ಮಾಡಿದರು ಆ ನೀರನ್ನು ನೋಡಿ ಮತ್ತೆ ಮಿಂದ್ ಎದ್ದೆವು ನಂತರ ಅಭಿಷೇಕಕ್ಕೆ ಹಣಿಯಾದ ಅರ್ಚಕರು ಅಭಿಷೇಕ ಮುಗಿಸಿ ಮಂಗಳಾರತಿ ಮುಗಿಸಿ ಪ್ರಸಾದವನ್ನು ವಿತರಿಸಿ ನಮ್ಮನ್ನು ಆಶೀರ್ವದಿಸಿದರು ಮತ್ತು ಅಲ್ಲಿನ ಸ್ಥಳ ಪುರಾಣವನ್ನು ಅವರೇ ವಿವರಿಸಿದರು.
ಸ್ಥಳ ಪುರಾಣದಂತೆ ಪಾರ್ವತಿ ದೇವಿಯು ಒಮ್ಮೆ ಶನಿಗ್ರಹದ ದುಷ್ಪರಿಣಾಮಗಳಿಂದ ತೊಂದರೆಗೀಡಾದಳು. ಶನಿಯ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು, ದೇವತೆಗಳ ಸಲಹೆಯಂತೆ ಭೂಲೋಕದಲ್ಲಿ ತಪಸ್ಸನ್ನು (ತಪಸ್ಸಿನಲ್ಲಿ ತೊಡಗಿಸಿಕೊಳ್ಳಲು) ನಿರ್ಧರಿಸಿದಳು. ಈ ದೇವಾಲಯದಿಂದ ೧೮ ಕಿಮೀ ದೂರದಲ್ಲಿರುವ ಮೃಗವಧೆಯಲ್ಲಿ ತನ್ನ ತಪಸ್ಸನ್ನು ಕೈಗೊಳ್ಳಲು ಅವಳು ಸೂಕ್ತವಾದ ಸ್ಥಳವನ್ನು ಆರಿಸಿಕೊಂಡಳು. ಆದ್ದರಿಂದ, ತನ್ನ ತಪಸ್ಸಿಗೆ ಅಡೆತಡೆಗಳನ್ನು ನಿವಾರಿಸಲು, ಪಾರ್ವತಿ ದೇವಿಯು ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲು ಬಯಸಿದಳು. ಹೀಗೆ ಪೂಜೆ ಸಲ್ಲಿಸಲು ಆಯ್ಕೆಮಾಡಿದ ಸ್ಥಳದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿದಳು. ಪಾರ್ವತಿ ದೇವಿಯ ನಿರ್ಧಾರದಿಂದ ಪ್ರಸನ್ನನಾದ ಬ್ರಹ್ಮನು ಸ್ಥಳದಲ್ಲೇ ಕಾಣಿಸಿಕೊಂಡನು ಮತ್ತು ಅವಳನ್ನು ಆಶೀರ್ವದಿಸುವ ಕಾರ್ಯವಾಗಿ ತನ್ನ ಕಮಂಡಲದಿಂದ (ಪವಿತ್ರ ಕುಂಡ) ಸ್ವಲ್ಪ ನೀರನ್ನು ಚಿಮುಕಿಸಿದನು. ಶೀಘ್ರದಲ್ಲೇ ಪಾರ್ವತಿ ದೇವಿಯು ಸ್ಥಾಪಿಸಿದ ಗಣೇಶನ ಮುಂದೆ ಬ್ರಾಹ್ಮಿ ಎಂಬ ನದಿಯು ಹರಿಯಿತು. ಆದ್ದರಿಂದ ಇಲ್ಲಿ ಗಣೇಶನನ್ನು ಕಮಂಡಲ ಗಣಪತಿ ಎಂದು ಕರೆಯಲಾಯಿತು ಮತ್ತು ಈ ದೇವಾಲಯಕ್ಕೆ ಕಮಂಡಲ ಗಣಪತಿ ದೇವಸ್ಥಾನ ಎಂದು ಹೆಸರು ಬಂದಿದೆ ಎಂದು ತಿಳಿಸಿದರು
ಈ ನದಿಯು ಬ್ರಹ್ಮನಿಂದ ಸೃಷ್ಟಿಯಾದ ಕಾರಣ ಬ್ರಾಹ್ಮಿ ಎಂಬ ಹೆಸರನ್ನು ಪಡೆದುಕೊಂಡಿದೆ. ಬ್ರಾಹ್ಮಿ ನದಿಯು ಹೂವಿನ ದಳಗಳಂತೆ ಕೆತ್ತಿದ ಸಣ್ಣ ಚೌಕಾಕಾರದ ಕಲ್ಲಿನ ವೇದಿಕೆಯ ರಂಧ್ರದಿಂದ ಹುಟ್ಟುತ್ತದೆ. ಅಲ್ಲಿಂದ ಎಡೆಬಿಡದೆ ನೀರು ಹರಿದು ಬರುವುದು ನಿಗೂಢ.

ನಂತರ ನಾವು ಪ್ರಸಾದ್ ಸ್ವೀಕರಿಸಿ ನೇರ ಬೆಳಗ್ಗಿನ ಉಪಹಾರ ಸವಿಯಲು ಶ್ರೀ ಗಜಾನನ ಭವನ ಬಂದವು ಶ್ರೀ ಗಜಾನನ ಭವನದಲ್ಲೂ ಸಹ ತಿಂಡಿ ಶುಚಿ ರುಚಿ ಎರಡು ಅದ್ಭುತವಾಗಿತ್ತು ತಿಂಡಿ ಸವಿದ ನಂತರ ಅದೇ ಹೋಟೆಲಿಗೆ ಕೊಪ್ಪ ಗ್ರಾಮದ ಸನ್ಮಾನ್ಯ ಸುಧೀರ್ ಕುಮಾರ್ ಮುರೊಳ್ಳಿಯವರು ಸಹ ಬಂದರು ಸುಧೀರ್ ಕುಮಾರ್ ಮುರೊಳ್ಳಿ ಅವರು ವಿಚಾರವಾದಿಗಳು ಚಿಂತಕರು ಮತ್ತು ನ್ಯಾಯವಾದಿಗಳು ಅಪಾರ ಚಳುವಳಿಗಳಲ್ಲಿ ಭಾಗವಹಿಸಿದವರು ಅವರನ್ನು ಪರಿಚಯಿಸಿಕೊಂಡು ನಮ್ಮ ಅಮೃತವಾಣಿ ದಿನಪತ್ರಿಕೆಯ 40ನೇ ವರ್ಷದ ಸ್ಮರಣ ಸಂಚಿಕೆಯನ್ನು ನೀಡಿದೆವು. ಗೌರವಪೂರ್ವಕವಾಗಿ ಸ್ವೀಕರಿಸಿದರು
ನಂತರ ನಮ್ಮ ಪಯಣ ಶೃಂಗೇರಿ ಕಡೆಗೆ ಪ್ರಾರಂಭಗೊಂಡು ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ದೇವಸ್ಥಾನ ಪ್ರಹಂಗಣದಲ್ಲಿ ಭಕ್ತಿಯಲ್ಲಿ ದರ್ಶನವನ್ನು ಪಡೆದೆವು 12:30 ರ ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡೆವು ನಂತರ ಮತ್ತೆ ಕೊಪ್ಪಾಗಿ ಹಿಂತಿರುಗಿ ಮತ್ತದೇ ಬದ್ರಯ ಹೋಟೆಲ್ನ ಸವಿಯನ್ನು ಸವಿದು.
ತುಮಕೂರಿನ ಕಡೆ ಪ್ರಯಾಣಿಸಿದವು ತರಿಕೆರಿಗೆ ಬಂದ ನಂತರ ಮನಸ್ಸು ಬದಲಾಯಿಸಿ ಹಿರಿಯೂರಿನ ರಸ್ತೆಯಾದರೂ ಸಹ ಸರಿ ಇರುತ್ತೆ ಅಂತ ಭಾವಿಸಿ ಹಿರಿಯೂರಿನ ಕಡೆಗೆ ಗಾಡಿ ಚಲಿಸಿದೆ ಸರಿಸುಮಾರು ತರೀಕೆರೆಯಿಂದ ಹೊಸದುರ್ಗದವರೆಗೂ ದಾರಿ ಚೆನ್ನಾಗಿದ್ದರೂ ಹೊಸದುರ್ಗದಿಂದ ಹಿರಿಯೂರುವರೆಗೂ ಸ್ವಲ್ಪ ತ್ರಾಸವಾಯಿತು ನಂತರ ಹೈವೇ ಪ್ರಾರಂಭವಾಯಿತು ಎಂದು ಖುಷಿ ಪಟ್ಟರೆ ಹೈವೆಯ ಸ್ಥಿತಿಯಂತೂ ಹೇಳುತ್ತಿರುವುದು ಎಲ್ಲಾ ಕಡೆ ಬ್ರಿಡ್ಜ್ ಗಳನ್ನು ನಿರ್ಮಿಸಲು ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಇನ್ನೂ ಆ ಕಾಮಗಾರಿಗಳು ಪೂರ್ಣಗೊಂಡಿಲ್ಲ ಕೆಲವು ಕಡೆ ಕೆಲಸವೇ ನಿಂತು ಹೋಗಿದೆ 280km ಕ್ರಮಿಸಲು ಬಿ ಎಚ್ ರಸ್ತೆಯಿಂದ ಆದರೂ ಸರಿ ಹಿರಿಯೂರಿನ ರಸ್ತೆಯಿಂದಲೂ ಸರಿ 6 ಗಂಟೆಗಳ ಸಮಯ ಬೇಕು.
ಸಮಯದ ವ್ಯರ್ಥ ಪೆಟ್ರೋಲ್ನ ವ್ಯರ್ಥ (ನ್ಯಾಷನಲ್ ವೇಸ್ಟ್ )ಸರಿಸುಮಾರು ನನಗನಿಸಿದ್ದು ಸನ್ಮಾನ್ಯ ನಿತಿನ್ ಗಡ್ಕರ್ ಯವರು ಭಾಷಣ ಮಾಡುವಂತೆ ರಸ್ತೆಗಳ ಅಭಿವೃದ್ಧಿ ಆಗಿದೆ ಎಂಬುದು ನನ್ನ ಒಂದು ಸಂಶಯ? ತುಮಕೂರು ಶಿವಮೊಗ್ಗ ರಸ್ತೆ ಐದು ವರ್ಷದಿಂದ ಸತತವಾಗಿ ಕಾರ್ಯ ನಡೆದರು 40 ಭಾಗ ಸಹ ಇನ್ನೂ ಪೂರ್ಣಗೊಂಡಿಲ್ಲ ಹಿರಿಯೂರು ಟು ತುಮಕೂರು ಚತುರ್ ಪರ್ಥ ರಸ್ತೆ ಎಂದು ಕುಲಗೆಡಿಸಿ ಇನ್ನು ಅದನ್ನು ಕಳೆ ಕಟ್ಟುವಂತೆ ಮಾಡಿಲ್ಲ ಇಷ್ಟೆಲ್ಲಾ ಆದರೂ ರಾಜ್ಯ ಬಿಜೆಪಿ ಅಧ್ಯಕ್ಷರು ತಮ್ಮ ತವರು ಜಿಲ್ಲೆಯ ಸಂಪರ್ಕ ರಸ್ತೆಗಳನ ಸರಿಪಡಿಸಲು ಕೇಂದ್ರಕ್ಕೆ ಒತ್ತಡ ಹಾಕಬಹುದಲ್ಲವೇ ಎಂಬುದು ನನ್ನ ಪ್ರಶ್ನೆ?.
ಲೇಖಕ: ಮಾರುತಿ ಗಂಗಹನುಮಯ್ಯ ಉಪ ಸಂಪಾದಕ, ಅಮೃತ ವಾಣಿ.
ಲೇಖಕ: ಮಾರುತಿ ಗಂಗಹನುಮಯ್ಯ ಉಪ ಸಂಪಾದಕ, ಅಮೃತ ವಾಣಿ.
ಜೇನುತುಪ್ಪದ ಅಭಿಷೇಕಕ್ಕೆ ವರ ಕೊಡುವ ಕಮಂಡಲ ಗಣಪಶ್ರೀ ಸುಧೀರ್ ಕುಮಾರ್ ಮುರೊಳ್ಳಿ ಅವರ ಜೊತೆಬಹಳ ದಿನಗಳ ನಂತರ ಒಂದು ಚಿಕ್ಕ ಪ್ರವಾಸದ ಕಾಲ ಕೂಡಿಬಂತು ಅಂದರೆ ಸಕಲೇಶಪುರ ಪ್ರವಾಸ ಮುಗಿಸಿದ ನಂತರ ಯಾವ ಪ್ರವಾಸವನ್ನು ಕೈಗೊಂಡಿರಲಿಲ್ಲ.
ಈ ಪ್ರವಾಸದ ಉದ್ದೇಶ ಏನು ಇರಲಿಲ್ಲ ಬಹಳ ದಿನಗಳಿಂದ ಮನಸ್ಸಿನಲ್ಲಿ ಕಮಂಡಲ ಗಣಪತಿ ದೇವಸ್ಥಾನವನ್ನು ನೋಡಬೇಕೆಂಬ ಬಯಕೆ ಇತ್ತು ಹಾಗೂ ಮಕ್ಕಳಿಗೆ ಪರೀಕ್ಷೆ ಸಮಯವಾದುದರಿಂದ ಅವರಿಗೂ ಸಹ ಗಣಪತಿ ಆಶೀರ್ವಾದ ಸಿಗಲಿ ಎಂಬ ಭಾವನೆ ಇತ್ತು.
ದಿನಾಂಕ 30/11/ 2024 ಶನಿವಾರ ಸಮಯ 03:30ಕೆ ತುಮಕೂರು ನಗರವನ್ನು ನಮ್ಮ ಕಾರಿನಲ್ಲೇ ನಾನು ನನ್ನ ಕುಟುಂಬ ಮತ್ತು ಮಕ್ಕಳ ಸಮೇತ ಪ್ರವಾಸವನ್ನು ಪ್ರಾರಂಭಿಸಿದೆವು.ಮೊದಲಿಗೆ ಹಿರಿಯೂರು ಮುಖಾಂತರ ಕೊಪ್ಪಗೆ ಹೋಗುವುದೆಂದು ನಂತರ ಬೆಂಗಳೂರು- ಹೊನ್ನಾವರ ರಸ್ತೆಯ ಕಾಮಗಾರಿಯನ್ನು ಮತ್ತು ಅದರ ಪ್ರಗತಿಯನ್ನು ಕಾಣುವ ಸಲುವಾಗಿ ಬಿ.ಹೆಚ್. ರಸ್ತೆ ಮೂಲಕ ತರೀಕೆರೆ ತಲುಪಿ ತರೀಕೆರೆಯಿಂದ ಕೊಪ್ಪಗೆ ಪ್ರಯಾಣ ಮಾಡುವುದೆಂದು ತೀರ್ಮಾನಿಸಿ ಬಿ. ಎಚ್. ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು, ಅರಸೀಕೆರೆ ಬೈಪಾಸ್ ಬಿಟ್ಟರೆ ಯಾವ ಬೈಪಾಸು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ ಕೆಲವು ಭಾಗಗಳಲ್ಲಿ ಅಂದರೆ ಸುಮಾರು 60 ಕಿಲೋಮೀಟರುಗಳ ಕಾಮಗಾರಿ ಪೂರೈಸಿದ್ದಾರೆ 2 ಟೋಲ್ ಗೇಟ್ಗಳನ್ನು ಅಳವಡಿಸಿದ್ದಾರೆ ಉಳಿದಂತೆ 120 ಕೀಮಿ ತರೀಕೆರೆ ವ್ಯಾಪ್ತಿಯವರೆಗೆ ಕಾಮಗಾರಿ ಕುಂಟುತಲೆ ಸಾಗಿದೆ ಅಥವಾ ಅಲ್ಲಲ್ಲೇ ಸಂಪೂರ್ಣ ನಿಂತು ಹೋಗಿದೆ.ತರೀಕೆರೆಯ ಅರಮನೆ ಹೋಟೆಲ್ ನಲ್ಲಿ ಸಂಜೆ ಕಾಫಿ ಕುಡಿದು ೫ ಗಂಟೆಗಳ ಪ್ರಯಾಣದ ನಂತರ ಕೊಪ್ಪ ತಲುಪಿದೆವು.ಮೊದಲೇ ನಿರ್ಧರಿಸಿದಂತೆ ಅಲ್ಲಿನ ಗುತ್ತಿ ಕಂಫರ್ಟ್ ವಸತಿ ಗೃಹದಲ್ಲಿ ವಾಸ್ತವ್ಯ ಉಡಿದೆವು ರಾತ್ರಿಯ ಊಟಕ್ಕೆ ವಸತಿಗೃಹದ ಮ್ಯಾನೇಜರ್ಅನ್ನು ವಿಚಾರಿಸಿದಾಗ ಆತ ವೆಜ್ ಆದರೆ ಶ್ರೀ ಗಜಾನನ ಭವನ ಹೋಗಿ ಅಥವಾ ನಾನ್ ವೆಜ್ ಆದರೆ ಬದ್ರಿಯಾ ಹೋಟೆಲ್ ಗೆ ಹೋಗಿ ಎಂದು ಸಲಹೆ ಕೊಟ್ಟನು ನಾವು ನಾನ್-ವೆಜ್ ಪ್ರಿಯರಾದರಿಂದ ಬದ್ರಿಯಾ ಹೋಟೆಲ್ ಗೆ ಪ್ರವೇಶ ಪಡೆದೆವು ಇಂಥ ಸಣ್ಣ ಪಟ್ಟಣದಲ್ಲಿ ನಾನ್ ವೆಚ್ ಚೆನ್ನಾಗಿರುತ್ತದೋ, ಇಲ್ಲವೋ ಎಂಬ ಅನುಮಾನದೊಂದಿಗೆ ಹೋಳ ಹೊಕ್ಕೆವು ಅದರ ಬೋರ್ಡ್ ನೋಡಿ ಸ್ವಲ್ಪ ಕುತೂಹಲ ಜಾಸ್ತಿ ಆಯಿತು ಕಾರಣ 1960 ರಿಂದ ನಡೆದು ಬಂದ ಹೋಟೆಲ್ ಎಂದು ತಿಳಿದು ಇಂದಿಗೆ ಮೂರನೇ ತಲೆ ಮಾರಿನವರು ಆ ಹೋಟೆಲ್ನನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಆಶ್ಚರ್ಯವಾಯಿತು.ಅದರ ಮಾಲೀಕರಾದ ಬದ್ರಯ ಅಹಮದ್ ರವರ ಪರಿಚಯ ಆಯಿತು ಮತ್ತು ರುಚಿ ಶುಚಿಯು ಸಹ ಬಹಳ ಚೆನ್ನಾಗಿತ್ತು ಊಟವನ್ನು ಮನಪೂರ್ವಕವಾಗಿ ಸವಿದೆವು.ಬೆಳಿಗ್ಗೆ ಆರು ಮೂವತ್ತಕ್ಕೆ ಸಿದ್ಧವಾಗಿ ಕಮಂಡಲ ಗಣಪತಿಗೆ ದರ್ಶನಕ್ಕೆ ಸಿದ್ಧವಾದವು, 10 ನಿಮಿಷದ ಹಾದಿ ನಾವು ದೇವಸ್ಥಾನವನ್ನು ಸೇರಿದೆವು.ಇದು ಕೊಪ್ಪ ತಾಲೂಕಿನ ಕೆಸವೆ ಗ್ರಾಮದ ಸಿದ್ದರಮಠ ರಸ್ತೆಯಲ್ಲಿದೆ. ಕೊಪ್ಪವು ಸಹ್ಯಾದ್ರಿ ಬೆಟ್ಟಗಳಿಂದ ಸುತ್ತುವರಿದಿದೆ ಮತ್ತು ಸಮುದ್ರ ಮಟ್ಟದಿಂದ 763 ಮೀಟರ್ ಎತ್ತರದಲ್ಲಿದೆ, ಆಹ್ಲಾದಕರ ಹವಾಮಾನ ಮತ್ತು ಸುಂದರ ಪ್ರಶಾಂತ ವಾತಾವರಣ ಸುತ್ತಲೂ ಕಡಿದಾದ ಕಾಡು ದಟ್ಟಾರಣ್ಯ ನಡುವೆ ಒಂದು ಪುಟ್ಟ ದೇವಾಲಯ ದೇವಾಲಯದ ಪರಂಗಣದಿAದ ಹರಿದು ಬರುವ ನೀರು ಔಷಧಿಯುಕ್ತ ಮತ್ತು ಖನಿಜ ಯುಕ್ತ ನೀರು ಒಂದು ಕೊಳವೆ ಮೂಲಕ ಮುಂದಿನ ಸ್ನಾನಘಟ್ಟವನ್ನು ತಲುಪುತ್ತು ನಾವು ಮುಂಚೆ ಸ್ನಾನ ಮಾಡಿದರು ಆ ನೀರನ್ನು ನೋಡಿ ಮತ್ತೆ ಮಿಂದ್ ಎದ್ದೆವು ನಂತರ ಅಭಿಷೇಕಕ್ಕೆ ಹಣಿಯಾದ ಅರ್ಚಕರು ಅಭಿಷೇಕ ಮುಗಿಸಿ ಮಂಗಳಾರತಿ ಮುಗಿಸಿ ಪ್ರಸಾದವನ್ನು ವಿತರಿಸಿ ನಮ್ಮನ್ನು ಆಶೀರ್ವದಿಸಿದರು ಮತ್ತು ಅಲ್ಲಿನ ಸ್ಥಳ ಪುರಾಣವನ್ನು ಅವರೇ ವಿವರಿಸಿದರು.
ಸ್ಥಳ ಪುರಾಣದಂತೆ ಪಾರ್ವತಿ ದೇವಿಯು ಒಮ್ಮೆ ಶನಿಗ್ರಹದ ದುಷ್ಪರಿಣಾಮಗಳಿಂದ ತೊಂದರೆಗೀಡಾದಳು. ಶನಿಯ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು, ದೇವತೆಗಳ ಸಲಹೆಯಂತೆ ಭೂಲೋಕದಲ್ಲಿ ತಪಸ್ಸನ್ನು (ತಪಸ್ಸಿನಲ್ಲಿ ತೊಡಗಿಸಿಕೊಳ್ಳಲು) ನಿರ್ಧರಿಸಿದಳು. ಈ ದೇವಾಲಯದಿಂದ ೧೮ ಕಿಮೀ ದೂರದಲ್ಲಿರುವ ಮೃಗವಧೆಯಲ್ಲಿ ತನ್ನ ತಪಸ್ಸನ್ನು ಕೈಗೊಳ್ಳಲು ಅವಳು ಸೂಕ್ತವಾದ ಸ್ಥಳವನ್ನು ಆರಿಸಿಕೊಂಡಳು. ಆದ್ದರಿಂದ, ತನ್ನ ತಪಸ್ಸಿಗೆ ಅಡೆತಡೆಗಳನ್ನು ನಿವಾರಿಸಲು, ಪಾರ್ವತಿ ದೇವಿಯು ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲು ಬಯಸಿದಳು. ಹೀಗೆ ಪೂಜೆ ಸಲ್ಲಿಸಲು ಆಯ್ಕೆಮಾಡಿದ ಸ್ಥಳದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿದಳು. ಪಾರ್ವತಿ ದೇವಿಯ ನಿರ್ಧಾರದಿಂದ ಪ್ರಸನ್ನನಾದ ಬ್ರಹ್ಮನು ಸ್ಥಳದಲ್ಲೇ ಕಾಣಿಸಿಕೊಂಡನು ಮತ್ತು ಅವಳನ್ನು ಆಶೀರ್ವದಿಸುವ ಕಾರ್ಯವಾಗಿ ತನ್ನ ಕಮಂಡಲದಿಂದ (ಪವಿತ್ರ ಕುಂಡ) ಸ್ವಲ್ಪ ನೀರನ್ನು ಚಿಮುಕಿಸಿದನು. ಶೀಘ್ರದಲ್ಲೇ ಪಾರ್ವತಿ ದೇವಿಯು ಸ್ಥಾಪಿಸಿದ ಗಣೇಶನ ಮುಂದೆ ಬ್ರಾಹ್ಮಿ ಎಂಬ ನದಿಯು ಹರಿಯಿತು. ಆದ್ದರಿಂದ ಇಲ್ಲಿ ಗಣೇಶನನ್ನು ಕಮಂಡಲ ಗಣಪತಿ ಎಂದು ಕರೆಯಲಾಯಿತು ಮತ್ತು ಈ ದೇವಾಲಯಕ್ಕೆ ಕಮಂಡಲ ಗಣಪತಿ ದೇವಸ್ಥಾನ ಎಂದು ಹೆಸರು ಬಂದಿದೆ ಎಂದು ತಿಳಿಸಿದರು
ಈ ನದಿಯು ಬ್ರಹ್ಮನಿಂದ ಸೃಷ್ಟಿಯಾದ ಕಾರಣ ಬ್ರಾಹ್ಮಿ ಎಂಬ ಹೆಸರನ್ನು ಪಡೆದುಕೊಂಡಿದೆ. ಬ್ರಾಹ್ಮಿ ನದಿಯು ಹೂವಿನ ದಳಗಳಂತೆ ಕೆತ್ತಿದ ಸಣ್ಣ ಚೌಕಾಕಾರದ ಕಲ್ಲಿನ ವೇದಿಕೆಯ ರಂಧ್ರದಿಂದ ಹುಟ್ಟುತ್ತದೆ. ಅಲ್ಲಿಂದ ಎಡೆಬಿಡದೆ ನೀರು ಹರಿದು ಬರುವುದು ನಿಗೂಢ.
ನಂತರ ನಾವು ಪ್ರಸಾದ್ ಸ್ವೀಕರಿಸಿ ನೇರ ಬೆಳಗ್ಗಿನ ಉಪಹಾರ ಸವಿಯಲು ಶ್ರೀ ಗಜಾನನ ಭವನ ಬಂದವು ಶ್ರೀ ಗಜಾನನ ಭವನದಲ್ಲೂ ಸಹ ತಿಂಡಿ ಶುಚಿ ರುಚಿ ಎರಡು ಅದ್ಭುತವಾಗಿತ್ತು ತಿಂಡಿ ಸವಿದ ನಂತರ ಅದೇ ಹೋಟೆಲಿಗೆ ಕೊಪ್ಪ ಗ್ರಾಮದ ಸನ್ಮಾನ್ಯ ಸುಧೀರ್ ಕುಮಾರ್ ಮುರೊಳ್ಳಿಯವರು ಸಹ ಬಂದರು ಸುಧೀರ್ ಕುಮಾರ್ ಮುರೊಳ್ಳಿ ಅವರು ವಿಚಾರವಾದಿಗಳು ಚಿಂತಕರು ಮತ್ತು ನ್ಯಾಯವಾದಿಗಳು ಅಪಾರ ಚಳುವಳಿಗಳಲ್ಲಿ ಭಾಗವಹಿಸಿದವರು ಅವರನ್ನು ಪರಿಚಯಿಸಿಕೊಂಡು ನಮ್ಮ ಅಮೃತವಾಣಿ ದಿನಪತ್ರಿಕೆಯ 40ನೇ ವರ್ಷದ ಸ್ಮರಣ ಸಂಚಿಕೆಯನ್ನು ನೀಡಿದೆವು. ಗೌರವಪೂರ್ವಕವಾಗಿ ಸ್ವೀಕರಿಸಿದರುನಂತರ ನಮ್ಮ ಪಯಣ ಶೃಂಗೇರಿ ಕಡೆಗೆ ಪ್ರಾರಂಭಗೊಂಡು ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ದೇವಸ್ಥಾನ ಪ್ರಹಂಗಣದಲ್ಲಿ ಭಕ್ತಿಯಲ್ಲಿ ದರ್ಶನವನ್ನು ಪಡೆದೆವು 12:30 ರ ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡೆವು ನಂತರ ಮತ್ತೆ ಕೊಪ್ಪಾಗಿ ಹಿಂತಿರುಗಿ ಮತ್ತದೇ ಬದ್ರಯ ಹೋಟೆಲ್ನ ಸವಿಯನ್ನು ಸವಿದು.ತುಮಕೂರಿನ ಕಡೆ ಪ್ರಯಾಣಿಸಿದವು ತರಿಕೆರಿಗೆ ಬಂದ ನಂತರ ಮನಸ್ಸು ಬದಲಾಯಿಸಿ ಹಿರಿಯೂರಿನ ರಸ್ತೆಯಾದರೂ ಸಹ ಸರಿ ಇರುತ್ತೆ ಅಂತ ಭಾವಿಸಿ ಹಿರಿಯೂರಿನ ಕಡೆಗೆ ಗಾಡಿ ಚಲಿಸಿದೆ ಸರಿಸುಮಾರು ತರೀಕೆರೆಯಿಂದ ಹೊಸದುರ್ಗದವರೆಗೂ ದಾರಿ ಚೆನ್ನಾಗಿದ್ದರೂ ಹೊಸದುರ್ಗದಿಂದ ಹಿರಿಯೂರುವರೆಗೂ ಸ್ವಲ್ಪ ತ್ರಾಸವಾಯಿತು ನಂತರ ಹೈವೇ ಪ್ರಾರಂಭವಾಯಿತು ಎಂದು ಖುಷಿ ಪಟ್ಟರೆ ಹೈವೆಯ ಸ್ಥಿತಿಯಂತೂ ಹೇಳುತ್ತಿರುವುದು ಎಲ್ಲಾ ಕಡೆ ಬ್ರಿಡ್ಜ್ ಗಳನ್ನು ನಿರ್ಮಿಸಲು ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಇನ್ನೂ ಆ ಕಾಮಗಾರಿಗಳು ಪೂರ್ಣಗೊಂಡಿಲ್ಲ ಕೆಲವು ಕಡೆ ಕೆಲಸವೇ ನಿಂತು ಹೋಗಿದೆ 280km ಕ್ರಮಿಸಲು ಬಿ ಎಚ್ ರಸ್ತೆಯಿಂದ ಆದರೂ ಸರಿ ಹಿರಿಯೂರಿನ ರಸ್ತೆಯಿಂದಲೂ ಸರಿ 6 ಗಂಟೆಗಳ ಸಮಯ ಬೇಕು.ಸಮಯದ ವ್ಯರ್ಥ ಪೆಟ್ರೋಲ್ನ ವ್ಯರ್ಥ (ನ್ಯಾಷನಲ್ ವೇಸ್ಟ್ )ಸರಿಸುಮಾರು ನನಗನಿಸಿದ್ದು ಸನ್ಮಾನ್ಯ ನಿತಿನ್ ಗಡ್ಕರ್ ಯವರು ಭಾಷಣ ಮಾಡುವಂತೆ ರಸ್ತೆಗಳ ಅಭಿವೃದ್ಧಿ ಆಗಿದೆ ಎಂಬುದು ನನ್ನ ಒಂದು ಸಂಶಯ? ತುಮಕೂರು ಶಿವಮೊಗ್ಗ ರಸ್ತೆ ಐದು ವರ್ಷದಿಂದ ಸತತವಾಗಿ ಕಾರ್ಯ ನಡೆದರು 40 ಭಾಗ ಸಹ ಇನ್ನೂ ಪೂರ್ಣಗೊಂಡಿಲ್ಲ ಹಿರಿಯೂರು ಟು ತುಮಕೂರು ಚತುರ್ ಪರ್ಥ ರಸ್ತೆ ಎಂದು ಕುಲಗೆಡಿಸಿ ಇನ್ನು ಅದನ್ನು ಕಳೆ ಕಟ್ಟುವಂತೆ ಮಾಡಿಲ್ಲ ಇಷ್ಟೆಲ್ಲಾ ಆದರೂ ರಾಜ್ಯ ಬಿಜೆಪಿ ಅಧ್ಯಕ್ಷರು ತಮ್ಮ ತವರು ಜಿಲ್ಲೆಯ ಸಂಪರ್ಕ ರಸ್ತೆಗಳನ ಸರಿಪಡಿಸಲು ಕೇಂದ್ರಕ್ಕೆ ಒತ್ತಡ ಹಾಕಬಹುದಲ್ಲವೇ ಎಂಬುದು ನನ್ನ ಪ್ರಶ್ನೆ?.
ಲೇಖಕ: ಮಾರುತಿ ಗಂಗಹನುಮಯ್ಯ ಉಪ ಸಂಪಾದಕ, ಅಮೃತ ವಾಣಿ.