ಕೊರಟಗೆರೆ ;- ಹನುಮ ಜಯಂತಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ, ಹನುಮಂತನ ಜನ್ಮದಿನದಂದು ಆಚರಿಸಲಾಗುತ್ತದೆ, ಹನು ಮಂತನು ಶಕ್ತಿಯ, ಭಕ್ತಿ ಮತ್ತು ಸಮರ್ಪಣೆಯ ಸ್ವರೂಪವಾಗಿದ್ದು, ರಾಮಾಯಣದ ಮೂಲಕ ಸರ್ವರ ಮನಸ್ಸನ್ನು ಗೆದ್ದರಿವ ದೈವವಾಗಿದ್ದು ದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಅವರು ಪಟ್ಟಣದ ಹೊರವಲಯದ ಮಾರುತಿ ನಗರ ಮೂಡ್ಲಪಣ್ಣೆಯ ಶ್ರೀ ಭೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ ಶ್ರೀ ಹನುಮ ಜಯಂತಿ ಮಹೋತ್ಸವ ಹಾಗೂ 25 ನೇ ವಾರ್ಷಿಕೋತ್ಸವ ಹಾಗೂ ಪಟ್ಟಣದ ಗುಂಡಾಜಂನೇಯಸ್ವಾಮಿ, ಗುಟ್ಟೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ನಡೆದ ವಿಶೇಷ ಹನುಮಜಯಂತಿ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ಹನುಮಂತನು ಕೇವಲ ಒಬ್ಬ ದೇವರಲ್ಲ ಹನುಮನು ಶ್ರದ್ದೆ, ದೈರ್ಯ ಮತ್ತು ನಿಶ್ವಾರ್ಥ ಸೇವೆಯನ್ನು ಮನುಷ್ಯ ಜೀವನದಲ್ಲಿ ಹೇಗೆ ಪಾಲಿಸಬೇಕೆಂಬುದಕ್ಕೆ ಆದರ್ಶ ಮಾದರಿಯಾಗಿದ್ದಾರೆ, ಹನುಮಂತನು ಅಪ್ರಮಿತ ಶಕ್ತಿ ಮತ್ತು ದೈರ್ಯದಿಂದ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಮೂಲವಾಗಿದೆ, ಹನು ಮಂತನ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಳವಡಿಸಲು ಪ್ರಯತ್ನಿಸುತ್ತಾರೆ, ವಿಶೇಷವಾಗಿ ಯುವಜನತೆ ಹನುಮಂತನ ಶಕ್ತಿಯ ಸಂಕೇತವಾಗಿ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ಶೌರ್ಯವನ್ನು ಬೆಳಿಸಿಕೊಳ್ಳುವುದಲ್ಲದೆ ತತ್ವ ಮತ್ತು ಜೀವನಶೈಲಿಯನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದಾಗಿದೆ ಎಂದು ತಿಳಿಸಿದರು. ಪ.ಪಂ ಮಾಜಿ ಸದಸ್ಯ ಹಾಗೂ ದೇವಾಲಯದ ಧರ್ಮದರ್ಶಿ ಕೆ.ಎಲ್.ಆನಂದ್ ಮಾತನಾಡಿ ಪ್ರಚಲಿತ ಯುಗದಲ್ಲಿ ಹನುಮ ಜಯಂತಿ ಆಚರಣೆ ಸಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಹೊಸ ಅರ್ಥಗಳನ್ನು ಪಡೆದುಕೊಂಡಿದೆ. ಜನರು ಹನುಮಂತನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಹಾಗೂ ಹನುಮ ಜಯಂತಿ ಯಂದು ಭಕ್ತರು ಹನುಮಂತನನ್ನು ಪ್ರಾರ್ಥಿಸಿ ಉಪವಾಸ ಮಾಡಿ ದೇವಾಲಯಗಳಿಗೆ ಬೇಟಿ ನೀಡಿ ಶ್ರದ್ದಾ ಭಕ್ತಿಯಿಂದ ಪ್ರಾರ್ಥಿಸುವ ಮೂಲಕ ತಮ್ಮ ಇಷ್ಠಾರ್ಥಗಳನ್ನು ನೇರವೇರಿಸಿ ಕೊಳ್ಳುತ್ತಾರೆ ಎಂದು ತಿಳಿಸಿದರು. ಪ್ರಧಾನ ಅರ್ಚಕ ಮಾರತಿ ನೇತೃತ್ವದಲ್ಲಿ ನಡೆದ ಹನುಮ ಜಯಂತಿ ವಿಶೇಷ ಕಾರ್ಯಕ್ರಮದಲ್ಲಿ ಕೆ.ಎಲ್.ಆನಂದ್, ನಿವೃತ್ತ ಶಿಕ್ಷಕ ಬಿ.ಹನುಮಂತರೆಡ್ಡಿ, ಸತ್ಯನಾರಾಯಣ ಶ್ರೇಷ್ಠಿ, ಗಿರೀಶ್, ಬೆಂಗಳೂರಿನ ಹನುಮಂತರಾಜು, ಸಂಜೀವಣ್ಣ, ಕೆ.ಎನ್.ಲೋಕೇಶ್, ಕೇಶವಮೂರ್ತಿ, ಕಮಲ, ಡಿ.ನರಸಿಂಹಯ್ಯ, ಗಿರಿಜಾ, ಜಯ ಲಕ್ಷ್ಮಮ್ಮ ,ಆರ್ ಲಕ್ಷ್ಮಮ್ಮ , ಸುಧಾ, ಭರತ್, ಹನು ಮಂತ, ಚಂದ್ರಮ್ಮ, ಆಕಾಶ್, ಗಗನ್ ಸೇರಿದಂತೆ ನೂರಾರು ಭಕ್ತರು ಹನುಮಂತಮ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಹನುಮ ಜಯಂತಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ, ಮಹತ್ವದ ಹಬ್ಬ-ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ
You Might Also Like
Sign Up For Daily Newsletter
Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
ಅಮೃತ ವಾಣಿ ಸುದ್ದಿಜಾಲ
Stay Connected
- Advertisement -