ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ತತ್ವ ಸಂದೇಶ ನಮಗೆಲ್ಲ ಪ್ರೇರಣೆ,ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಚಂದ್ರಶೇಖರರೆಡ್ಡಿ ಕರೆ
ಪಾವಗಡ ಮೇ 11 ಶಿವಶರಣೆಯರಾದ ಮಹಾಸಾದ್ವಿ,ಹೇಮರೆಡ್ಡಿ ಮಲ್ಲಮ್ಮ ಅವರ ವಚನ ಹಾಗೂ ಸಂದೇಶ ಪಾಲಿಸುವ ಮೂಲಕ ಮುನ್ನಡೆಯುವಂತೆ ತುುಮುಲ್ ನಿರ್ದೇಶಕ ಹಾಗೂ ರೆಡ್ಡಿ ಸಮುದಾಯದ ತಾಲೂಕು ಅಧ್ಯಕ್ಷ ಬೆಳ್ಳಿಬಟ್ಟಲು ಚಂದ್ರಶೇಖರ್ ರೆಡ್ಡಿ ಕರೆ ನೀಡಿದರು.
ತಾಲೂಕು ಆಡಳಿತ ಹಾಗೂ ರೆಡ್ಡಿ ಸಮುದಾಯದ ವತಿಯಿಂದ ಶನಿವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದರು.ಮಹಾಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಮಹಾ ಶಿವಭಕ್ತರಾಗಿದ್ದು ಸಮಾಜದ ಉನ್ನತ ಪರಿವರ್ತನೆಗೆ ತಮ್ಮ ವಚನಾ ಸಾಹಿತ್ಯದ ಮೂಲಕ ಅನೇಕ ಸಂದೇಶ ನೀಡಿದ್ದಾರೆ.ಅವರ ಭಕ್ತಿ ಹಾಗೂ ಅದರ್ಶದ ಬದುಕು ನಮಗೆಲ್ಲ ಪ್ರೇರಣೆ.ಅವರ ತತ್ವ ಸಂದೇಶಗಳನ್ನು ಅರ್ಥೈಸಿಕೊಳ್ಳುವ ಮೂಲಕ ಬದಕುಕಟ್ಟಿಕೊಳ್ಳವಂತೆ ತಿಳಿಸಿದರು. ತಹಸೀಲ್ದಾರ್ ಡಿ.ಎನ್.ವರದರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೇಮರೆಡ್ಡಿ ಮಲ್ಲಮ್ಮ ಅವರ ಅನೇಕ ವಿಚಾರಗಳು ವಿವರಿಸಿ ಪಾಲಿಸುವಂತೆ ಕರೆ ನೀಡಿದರು.ತಾಲೂಕು ರೆಡ್ಡಿ ಸಮುದಾಯದ ಮುಖಂಡರಾದ ಹೊಸಹಳ್ಳಿಯ ವಿ.ಚಿಂತಲರೆಡ್ಡಿ,ನಾಗಭೂಷಣರೆಡ್ಡಿ,ಲಿಂಗದಹಳ್ಳಿ ಸಣ್ಣರಾಮರೆಡ್ಡಿ,ನರಸಿಂಹರೆಡ್ಡಿ,ಕ್ಯಾತಗಾನಚೆರ್ಲು ದೈವದೀನಂರೆಡ್ಡಿ,ರಾಮಾಂಜಿನ ರೆಡ್ಡಿ,ಗುತ್ತಿಗೆದಾರ ಬ್ರಹ್ಮನಂದರೆಡ್ಡಿ,ಶ್ರಾವಣ್ ರೆಡ್ಡಿ ಶ್ರೀನಿವಾಸ್ ರೆಡ್ಡಿ ವೇಣುಗೋಪಾಲರೆಡ್ಡಿ, ಪೆದ್ದಾರೆಡ್ಡಿ,ಈರಣ್ಣರೆಡ್ಡಿ ಹಾಗೂ ಕಂದಾಯ ಇಲಾಖೆಯ ಆರ್ಐ ರಾಜ್ಗೋಪಾಲ್,ಕಿರಣ್ಕುಮಾರ್,ಪಿಎಗಳಾದ ಗುರೀಶ್,ರಾಜೇಶ್ ಹಾಗೂ ಇತರೆ ಅನೇಕ ಮಂದಿ ರೆಡ್ಡಿ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳಿದ್ದರು.¸
ತಾಲೂಕು ಆಡಳಿತ ಹಾಗೂ ರೆಡ್ಡಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ತಹಸೀಲ್ದಾರ್ ವರದರಾಜು ಹಾಗೂ ಚಂದ್ರಶೇಖರರೆಡ್ಡಿ ಪುಷ್ಪನಮನ ಸಲ್ಲಿಸಿ ಸ್ಮರಿಸಿದರು.