ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಮೇಡಂ,
ಅಧಿಕಾರಿಗಳಿಗೆ ತರಾಟೆಗೆ ತೊಗೊಂಡ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ
ಸಿರಾ ,ಡಿ 16 :ಕಾರ್ಯಕ್ರಮ ಉದ್ಘಾಟಿಸಿದ ಸಿರಾ ಶಾಸಕ ಹಾಗೂ ದೆಹಲಿ ವಿಷೇಶ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಧಾನಪರಿಷತ್ ಶಾಸಕರಾದ ಚಿದಾನಂದ್. ಎಂ. ಗೌಡ,ತುಮಕೂರು ನೂತನ ಜಿಲ್ಲಾಧಿಕಾರಿಗಳಾದ ಶುಭಾ ಕಲ್ಯಾಣ್,ಅಪಾರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ,
ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಣ ಅಧಿಕಾರಿ ಪ್ರಭು.ಜಿ, ಭುವನಹಳ್ಳಿ ಗ್ರಾಮ. ಪಂ.ಅಧ್ಯಕ್ಷರಾದ,ಮಂಜುಳ, ಸಿರಾ ನಗರಸಭೆ ಅಧ್ಯಕ್ಷರಾದ ಪೂಜಾ ಪೆದ್ದರಾಜು, ತಾಲ್ಲೂಕು ದಂಡಾಧಿಕಾರಿಗಳಾದ ದತ್ತಾತ್ರೇಯ ಘಾದ, ತಾಲ್ಲೂಕು ಕಾರ್ಯನಿರ್ವಾಹಣ ಅಧಿಕಾರಿ ಅನಂತರಾಮು. ಜನತಾದರ್ಶನದಲ್ಲಿ ಎಲ್ಲಾ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಪ್ರಾತ್ಯಕ್ಷಿಕ ಮಳಿಗೆ ಮಾಡುವ ಮೂಲಕ ಜನರಿಗೆ ಮಾಹಿತಿ ನೀಡಿದ್ದು ಗಮನ ಸೆಳೆಯಿತು. ಎಲ್ಲಾ ಇಲಾಖೆಯ ಸಂಬಂಧಪಟ್ಟ ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲಿ ಕಾನೂನು ಅಡಿಯಲ್ಲಿ ಬಗೆಹರಿಸಲಾಗಿತ್ತು.
ಜನತಾ ದರ್ಶನದಲ್ಲಿ ರೈತರಿಬ್ಬರೂ ವಿಷೇಶವಾಗಿ ಅರ್ಜಿ ನೀಡಿದ್ದು ಗಮನ ಸೆಳೆಯಿತು,
ಇದೇ ವೇಳೆ, ಅರ್ಹ ಫಾಲಾನುಭವಿಗಳಿಗೆ, ಸಂದ್ಯಾ ಸುರಕ್ಷಾ ಪಿಂಚಣಿ, ಆಯುಷ್ ಮಾನ್ ಆರೋಗ್ಯ ಕಾರ್ಡ್ , ರೇಷ್ಮೆ ಇಲಾಖೆವತಿಯಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಅಂಚೆ ಇಲಾಖೆಯವತಿಯಿಂದ ಪಾಸ್ ಬುಕ್, ಕಾರ್ಮಿಕ ಇಲಾಖೆವತಿಯಿಂದ ಠೇವಣಿ ಬಾಂಡ್ ವಿತರಿಸಲಾಗಿತ್ತು.
ಈ ಸಂದರ್ಭದಲ್ಲಿ, ಕೆಎಡಿಬಿ ವ್ಯವಸ್ಥಾಪಕ ನಿರ್ದೇಶಕ ಸೋಮಪ್ಪ ಕಡಗೋಳೆ,
ಭೂ ದಾಖಲೆ ಉಪನಿರ್ದೇಶಕ ನಿರಂಜನ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಗೋಪಾಲಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಬೆಸ್ಕಾಂ ಎ ಇ ಇ ಶಾಂತರಾಜು, ಗೋವಿಂದರಾಜು, ಭುವನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮುರಳಿಧರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಮೇಡಂ.
ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ಜಯರಾಮಪ್ಪ ಎಂಬ ರೈತ ಶಿರಾ ನಗರದ ಮಿನಿ ವಿಧಾನಸೌಧದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಅರ್ಜಿ ಸಲ್ಲಿಸುವ ಮೂಲಕ ಗಮನ ಸೆಳೆದರು
ಅಧಿಕಾರಿಗಳಿಗೆ ತರಾಟೆಗೆ ತೊಗೊಂಡ mlc ಚಿದಾನಂದ್ ಗೌಡ
ಜನತಾದರ್ಶದಲ್ಲಿ ಕೆಲ ನಿಮಿಷ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ. ಗೌಡ ರವರ ಭಾವ ಚಿತ್ರವನ್ನು ಹಾಗದಿರುವುದನ್ನು ಮನಗಂಡ ಕೆಲ ಅಭಿಮಾನಿಗಳು, ಭಾವ ಚಿತ್ರ ಇಲ್ಲದಿರುವುದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಈ ರೀತಿ mlc ಚಿದಾನಂದ್ ಗೌಡ ರವರಿಗೆ ಹಾಗೂ ನಗರಸಭೆ ಪೂಜಾ ಪೆದ್ದರಾಜು ರವರಿಗೆ ಅಗೌರವ ತೋರಿದ ಇನ್ನಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ನೆರೆದಿದ್ದ ಕೆಲ ಅಭಿಮಾನಿಗಳು ಹಾಗೂ ಜನಸಾಮನ್ಯರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಇದೇ ವೇಳೆ mlc ಚಿದಾನಂದ್ ಗೌಡ ಮಾತನಾಡಿ, ತಾಲ್ಲೂಕ್ ನಲ್ಲಿ ಅಧಿಕಾರಿಗಳು ಗೌರವ ಕೊಡುವಲ್ಲಿ ವಿಫಲವಾಗಿದ್ದು, ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಮುಂಚಿತವಾಗಿ ತಿಳಿಸದೇ, ಇನ್ನೇನು ಕೆಲವೇ ನಿಮಿಷಗಳು ಇರುವಾಗ ಕರೆ ಹೇಳುತ್ತಿದ್ದೂ, ಜನಪ್ರತಿನಿಧಿಗಳಿಗೆ ತುಂಬಾ ಬೇಸರ ತಂದಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಇಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ತಿಳಿಸಿದರು.
ಗೊಂದಲ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಧಾವಿಸಿ, ಬಗೆ ಹರಿಸಿದರು, ಅಗೌರವ ತೋರಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ mlc.
ವರದಿ : ಜಯಪಾಲ್ ಎನ್ ,ಸಿರಾ