ಸ್ಮಾರ್ಟ್ ಸಿಟಿ ಎಂಬ ಹೆಸರಿಗೆ ಕಳಂಕ
ತುಮಕೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಳಚೆ ನೀರು ಹೊಲಗದ್ದೆಗಳಲ್ಲಿ ಶೇಖರಣೆಯಾಗುತ್ತಿದ್ದು ಮುಂದೆ ಸಂಕ್ರಾಮಿಕಾರೋಗಳಿಗೆ ಡ್ಯಂಗೂ, ಮಲೇರಿಯಾ ಮುಂತಾದ ರೋಗಗಳ ತಾಣವಾಗಲ್ಲಿದೆಯೇ ಎಂಬ ಪ್ರಶ್ನೆ ಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಉದಾರಣೆಗೆ ತುಮಕೂರು ನಗರದ ಒಳಚರಂಡಿ ಶುದ್ಧೀಕರಣ ಘಟಕದ ಕೇಂದ್ರದ ಬಳಿ ಭೀಮಸಂದ್ರಕ್ಕೆ ಹೊಂದಿಕೊಂಡಂತೆ ಇರುವ ಈ ಶುದ್ದಿಕರಣ ಘಟಕದ ಕೊಳಚೆ ನೀರು ತುಮಕೂರು ನಗರದಿಂದ ಹಾದು ಹೋಗುವ ಕೊಳಚೆ ನೀರು ಸಮ್ಮಿಲನಗೊಂಡು ಮೇಳೆಕೋಟೆ ಮತ್ತು ಭೀಮಸಂದ್ರ ನಡುವೆ ಇರುವ ಬಯಲು ಪ್ರದೇಶದಲ್ಲಿ ಹರಡಿಕೊಂಡಿದೆ ಈ ಕೊಳಚೆ ನೀರು ಮುಂದೆ ರೈತಾಪಿ ವರ್ಗ ವ್ಯವಸಾಯ ಮಾಡುವ ಅಚ್ಚುಕಟ್ಟು ಪ್ರದೇಶಗಳಾದ ಮೇಳೆ ಕೋಟೆ ಕೆರೆ ಅಚ್ಚುಕಟ್ಟು ಪ್ರದೇಶದಿಂದ ಸಾಗಿ ಮಲ್ಲಸಂದ್ರ ಕೆರೆ ಅಚ್ಚುಕಟ್ಟು ಪ್ರದೇಶದವರೆಗೂ ಸಾಗುತ್ತದೆ ಈ ಕೊಳಚೆ ನೀರು ಕೆರೆಯನ್ನು ಸೇರಿ ಕೆರೆಗಳು ಕಳುಷಿತವಾಗುವುದಲ್ಲದೆ ಕೆರೆಯಲ್ಲಿರುವ ಜಲಚರಗಳ ಮೇಲು ಪ್ರಭಾವ ಬೀರುತ್ತದೆ. ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ತುಮಕೂರಿನ ಈ ಕೊಳಚೆ ನೀರು ಸಾಗುವುದರಿಂದ ಅಲ್ಲಿ ಉತ್ಪತ್ತಿಯಾಗುವ ಕೀಟಗಳಿಂದ ಉಂಟಾಗಬಹುದಾದ ಮಲೇರಿಯಾ ,ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳಿಗೆ ಜನರು ತುತ್ತಾಗುವ ಸಾಧ್ಯತೆಯನ್ನು ತಳ್ಳಿಯಾಕುವಂತಿಲ್ಲ ಭೀಮಸಂದ್ರ,ಮೇಳೆಕೋಟೆ, ವೀರ ಸಗರ, ಟಿಪ್ಪು ನಗರ ಹಾಗು ದಾನ ಪ್ಯಾಲೇಸ್ ಹಿಂಭಾಗದ ಬಡಾವಣೆಗಳ ನಾಗರಿಕರು ನಿತ್ಯ ಸೊಳ್ಳೆ ಕಾಟ ತಾಳಲಾರದೆ ಪಾಲಿಕೆಗೂ ಹಾಗೂ ಒಳಚರಂಡಿ ಮಂಡಲಿಗೆ ಶಾಪ ಹಾಕುವಂತಾಗಿದೆ.
ಈಗಾಗಲೇ ಮಹಾ ಮಾರಿ ಕರೋನಾ ಮತ್ತೆ ಕಾಣಿಸಿಕೊಂಡು ತುಮಕೂರು ನಗರದಲ್ಲೂ ಸಹ ಮೂರು ಪಾಸಿಟಿವ್ ಕೇಸ್ಗಳು ಗುರುತಿಸಿದ್ದು ಇದರ ನಡುವೆ ಸಾಂಕ್ರಾಮಿಕ ರೋಗ ತೀವ್ರ ಗತಿಯಲ್ಲಿ ಏರಿಕೆ ಆದರೆ ಏನು ಗತಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುವಂತಾಗಿದೆ.
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಹಾಗೂ ಒಳಚರಂಡಿ ಮಂಡಳಿ ಈಗಲಾದರೂ ಎಚ್ಚೆತ್ತು ತುಮಕೂರಿಂದ ಸಾಗುವ ಕೊಳಚೆ ನೀರು ಮತ್ತು ಶುದ್ದಿಕರಣ ಕೇಂದ್ರದ ನೀರು ಸರಾಗವಾಗಿ ಟ್ರೀಟ್ಮೆಂಟ್ ಗೊಂಡ ಶುದ್ದಿ ಕರಿಸಿದ ನೀರು ಆಚೆ ಹೋಗಲು ಅನುವು ಮಾಡಿದ್ದಲ್ಲಿ ನಗರ ಆಡಳಿತವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಲಿದೆ ದಯಮಾಡಿ ಸಂಬಂಧಪಟ್ಟ ಇಲಾಖೆಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ನಡುವೆ ಜಿಲ್ಲಾ ಸಚಿವರು ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸುವಂತಹ ಮಾತನಾಡಿದ್ದಾರೆ ಆದರೆ ಇರುವ ಈ ಪ್ರದೇಶದಲ್ಲೇ ನೈರ್ಮಲ್ಯ ಶುದ್ದಿ ಯಾಗದಿರುವುದು ಯಾರ ವೈಫಲ್ಯ ಜಿಲ್ಲಾ ಸಚಿವರ ಮೇಲೆ ಭರವಸೆ ಮೂಡಿಸುವಂತಹ ಕೆಲಸಗಳನ್ನು ಜಿಲ್ಲಾಡಳಿತ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದೇ ಪ್ರದೇಶದಲ್ಲಿ ವ್ಯಕ್ತಿ ಒಬ್ಬ ಮಳೆ ನೀರು ಮತ್ತು ಕೊಳಚೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವಪ್ಪಿದ ಘಟನೆ ನಡೆದಿದ್ದು.