ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಹಾಸನ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಡಳಿತ ಹಾಗೂ ಜಿಲ್ಲಾ ಪಂಚಾಯಿತ್ ಹಾಸನ ವತಿಯಿಂದ ನೆಡೆದ 2023-24ನೇ ಸಾಲಿನ 3 ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
* ಜಿಲ್ಲಾದ್ಯಂತ ರೈತರಿಗೆ ನೀಡುವ ಸಬ್ಸಿಡಿ ರಸಗೊಬ್ಬರ ಸರಿಯಾಗಿ ಸರಬರಾಜು ಆಗದೆ ಖಾಸಗಿಯವರ ಪಾಲು ಆಗುತ್ತಿರುವುದರ ಬಗ್ಗೆ ಕಠಿಣಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
* ಕೈ ಗೆ ಎಟಗುವಂತೆ ಜೋತು ಬಿದ್ದಿರುವ ವಿದ್ಯುತ್ ಸಂಪರ್ಕದ ತಂತಿಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು ಸರಿಪಡಿಸಲು ಸೂಚಿಸಲಾಯಿತು.
* ಗ್ರಾಮ ಒನ್ ಸಿಬ್ಬಂದಿಗಳ ಬಗ್ಗೆ ದೂರು ಹೆಚ್ಚಾಗಿದ್ದು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಸೂಚಿಸಲಾಯಿತು.
* ಜಿಲ್ಲೆಯಾದ್ಯಂತ ಹಳ್ಳಿಗಳ ರಸ್ತೆಗಳಲ್ಲಿ ಜಂಗಲ್ ಬೆಳೆದು ಅಪಘಾತಗಳು ಹೆಚ್ಚಾಗುತ್ತಿರುವ ಕಾರಣ ಅಧಿಕಾರಿಗಳು ರಸ್ತೆ ಬದಿಯ ಜಂಗಲ್ ದುರಸ್ಥಿಕಾರ್ಯ ಕೈಗೊಂಡು ಸಾರ್ವಜನಿಕರ ಸುಗಮಸಂಚಾರಕ್ಕೆ ಅನುವು ಮಾಡಿಕೊಡಲು ಅದೇಶಿಸಲಾಯಿತು.
* ಪೋಲೀಸ್ ಅಧಿಕಾರಿಗಳು ದೂರು ಕೊಡಲು ಬರುವ ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ಥಿಸುತ್ತಿಲ್ಲವೆಂಬ ದೂರು ಕೇಳಿಬಂದಿದ್ದು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಲಾಯಿತು.
* ನೂತನವಾಗಿ ನಿರ್ಮಿಸಿರುವ ತಾಯಿ, ಮಕ್ಕಳ ಆಸ್ಪತ್ರೆ, ನಿರ್ಮಿಸಿ ವರ್ಷ ಕಳೆದರೂ ಉದ್ಘಾಟನೆ ಆಗದ ಕಾರಣ ದಿನಾಂಕ ನಿಗದಿ ಪಡಿಸಿ ಪ್ರಾರಂಭಿಸಲು ಸೂಚಿಸಲಾಯಿತು.
* ಎನ್. ಆರ್. ಸರ್ಕಲ್ ನಿಂದ ಬಸ್ ನಿಲ್ದಾಣದವರೆಗೆ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣದ ತ್ವರಿತವಾಗಿ ಪೂರ್ಣಗೊಳಿಸಲು ಅದೇಶಿಸಲಾಯಿತು.
* ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಓವರ್ ಹೆಡ್ ಟ್ಯಾಂಕ್ ಗಳ ಸ್ವಚ್ಛತೆ ಮಾಡಲು ಸೂಚಿಸಲಾಯಿತು.
* B O ರವರು ಶಾಲಾ ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಕ್ರಮ ವಹಿಸಲು ಮತ್ತು ಬಾಲಕಾರ್ಮಿಕರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲು ಅದೇಶಿಸಲಾಯಿತು.
* ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸ್ವಚ್ಛತೆ ಮತ್ತು ಕುಂದು ಕೊರತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಹೆಚ್.ಡಿ.ರೇವಣ್ಣನವರು, ಶಿವಲಿಂಗೇ ಗೌಡರವರು, ಸ್ವರೂಪ್ ಪ್ರಕಾಶ್ ರವರು, ಎ.ಮಂಜುರವರು, ಸಿಮೆಂಟ್ ಮಂಜುರವರು, ಹೆಚ್.ಕೆ ಸುರೇಶ್ ರವರು, ಜಿಲ್ಲಾಧಿಕಾರಿಯಾದ ಸತ್ಯಭಾಮ ರವರು, ಸಿ.ಇ.ಓ. ಪೂರ್ಣಿಮ ರವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.