ತುಮಕೂರು,ನ.೭-ನಳಂದ ವಿಶ್ವವಿದ್ಯಾಲಯದಲ್ಲಿ ಬಹುಶಿಸ್ತಿನ ವಿಧಾನದ ಮೂಲಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಹಾಗೂ ಮೊಬೈಲ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು,. ಉದಾಹರಣೆಗೆ ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳುವಂತೆ “ಶಿಕ್ಷಣ ಒಂದು ಶಕ್ತಿ” ಇದು ನಮ್ಮನ್ನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ತಲೆ ಎತ್ತಿ ನಿಲ್ಲುವಂತೆ ಮಾಡುವ ಕೆಲಸ ವಿದ್ಯಾರ್ಥಿಗಳು. ದೇಶ ವಿದೇಶಗಳಲ್ಲಿಯೂ ಇಂಜಿನಿಯರಿAಗ್ ಕ್ಷೇತ್ರಕ್ಕೆ ಸಾಕಷ್ಟು ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಪರಿಣಿತಿ ಹೊಂದಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾ ಲಯದ ಉನ್ನತ ಶಿಕ್ಷಣ ಪರಿಷತ್ನ ಮಾಜಿ ಉಪಕುಲಪತಿಗಳಾದ ಪ್ರೊ.ಎಸ್. ಆರ್. ನಿರಂಜನ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಇಂಜಿನಿ ಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿ.ಇ.ತರಗತಿಗಳ ಉದ್ಘಾಟನಾ ಕಾರ್ಯ ಕ್ರಮದ ನ.೫ ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಎಮರ್ಜ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯಸ್ಥರಾದ ವಿಶ್ವಮೋಹನ್ರವರು ಮಾತನಾಡುತ್ತಾ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣ ಪಡೆಯುವ ಮೂಲಕ ನಿಮ್ಮ ಗುರಿ ತಲುಪಿ, ಬದುಕಿನಲ್ಲಿ ಥಾಮರ್ಸ್ ಆಲ್ಟಾ, ಎಡಿಸನ್, ಅಬ್ದುಲ್ ಕಲಾಂ ಇವರಂತಹ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಮುಂದೆ ಬರುವಂತೆ ವಿದ್ಯಾರ್ಥಿಗಳನ್ನು ಕುರಿತು ಪ್ರೋತ್ಸಾಹದ ನುಡಿಗಳನ್ನು ನುಡಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹೊಂದಲು ಶಿಕ್ಷಣ ಬಹಳ ಮುಖ್ಯವಾಗಿದೆ. ಮೊಬೈಲ್ ಮತ್ತು ಕಂಪ್ಯೂಟರ್ಗಳ ವ್ಯತ್ಯಾಸಗಳನ್ನು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಷಿ ಯಲ್ ಇಂಟೆಲಿಜೆನ್ಸ್ ಕ್ಷೇತ್ರ ಬಲಗೊಂಡು ಜನ ಜೀವನ ಬದಲಾವಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ. ಪ್ರತಿವರ್ಷ ದೇಶದಲ್ಲಿ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಇಂಜಿನಿಯರುಗಳು ಪದವಿ ಮುಗಿಸಿ ಹೊರಬರುತ್ತಿದ್ದರೂ ಇವರ ಪೈಕಿ ಬಹಳಷ್ಟು ಜನರಿಗೆ ಉದ್ಯೋಗ ದೊರೆಯದೇ ಇರುವುದಕ್ಕೆ ಕೌಶಲ್ಯದ ಕೊರತೆಯೇ ಕಾರಣ ಎಂಬುದನ್ನು ಮನಗಾಣಬೇಕು. ಯುವ ಸಮೂಹ ದೇಶದ ದೊಡ್ಡ ಆಸ್ತಿ, ಎಂಜಿನಿಯರಿAಗ್ ವೃತ್ತಿಪರರು ಸಮಾಜದ ಸಮಸ್ಯೆಗಳಿಗೆ ಪರಿಹಾರದ ಭಾಗವಾಗಬೇಕು. ವಿದ್ಯಾರ್ಥಿಗಳು ಶ್ರದ್ದೆ, ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಹೊಸ ಹೊಸ ವಿಚಾರಗಳು ನಮ್ಮ ಸಂಸ್ಥೆಯ ಅಧ್ಯಾಪಕ ವರ್ಗದವರು ವಿದ್ಯಾರ್ಥಿಗಳಿಗೆ ಸದಾ ಕಲ್ಪಿಸುತ್ತಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶ್ರೀದೇವಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಓದಿನ ಪರಿಸರ ಮತ್ತು ಜ್ಞಾನಾರ್ಜನೆಗೆ ಸುಸಜ್ಜಿತ ಸೌಕರ್ಯಗಳನ್ನು ಒದಗಿಸಿ ಉತ್ತಮ ಸಾಧನೆಗೆ ಮಾರ್ಗದರ್ಶನ ನೀಡುವುದೇ ನಮ್ಮ ಗುರಿಯೆಂದು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು. ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನ ವಿಟಿಯು ಅಕಾಟಮಿಕ್ ಸೆನೆಟ್ ಸದಸ್ಯರು ಹಾಗೂ ಪ್ರಾಂಶುಪಾಲರಾದ ಡಾ.ನರೇಂದ್ರವಿಶ್ವನಾಥ್ರವರು ಮಾತನಾಡುತ್ತಾ ಅವಿರತ ಶ್ರದ್ಧೆ ಮತ್ತು ಉತ್ತಮ ಫಲಿತಾಂಶ ಮತ್ತು ಸಮರ್ಪಕ ಉದ್ಯೋಗಗಳಿಕೆ ವಿದ್ಯಾರ್ಥಿಗಳ ಗುರಿಯಾ ಗಲೆಂದು ಶುಭ ಹಾರೈಸಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಪರಿಷತ್ನ ಮಾಜಿ ಉಪಕುಲಪತಿಗಳಾದ ಪ್ರೊ.ಎಸ್.ಆರ್.ನಿರಂಜನ್ ಹಾಗೂ ಎಮರ್ಜ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯಸ್ಥರಾದ ವಿಶ್ವಮೋಹನ್ ರವರಿಗೆ ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನ ವತಿಯಿಂದ ಸನ್ಮಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಮುಖ್ಯಸ್ಥರಾದ ಡಾ.ಎಂ.ಕೆ.ಕಿಶೋರ್ ಕುಮಾರ್, ಕಾರ್ಯ ಕ್ರಮದ ಕೋ-ಅಡಿನೇಟರ್ ಡಾ.ಕೆ.ಆರ್. ನಂದನ್, ಹಾಗೂ ಕಾಲೇಜಿನ ಡೀನ್ ಅಕಾಟಮಿಕ್ಸ್ ಡಾ.ಎನ್.ಚಂದ್ರಶೇಖರ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.