ತುಮಕೂರು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಐಟಿ ಹಬ್ ನಿರ್ಮಿಸಲು ಆಗ್ರಹ
ತುಮಕೂರು ಫೆ 20: ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ತುಮಕೂರು ಜಿಲ್ಲೆಗೆ ಆದ್ಯತೆ ನೀಡಿ ಈ ಕೆಲವು ಅಂಶಗಳನ್ನು ಸೇರಿಸಬೇಕೆಂದು ಟಿ ಜೆ ಗಿರೀಶ್ ನಿಕಟಪೂರ್ವ ಅಧ್ಯಕ್ಷರು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶೈಕ್ಷಣಿಕ ನಗರ ಎಂದು ಪ್ರಸಿದ್ಧಿಯಾಗಿರುವ ತುಮಕೂರು ಜಿಲ್ಲೆಯಲ್ಲಿ 7 ಇಂಜಿನಿಯರಿಂಗ್ ಕಾಲೇಜು, 3 ಮೆಡಿಕಲ್ ಕಾಲೇಜುಗಳು, ಸುಮಾರು ಐಟಿಐ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಹಾಗೂ ತುಮಕೂರು ಯೂನಿವರ್ಸಿಟಿ ಇದ್ದು ಸುಮಾರು 50 ರಿಂದ 60 ಸಾವಿರ ಜನರು ತುಮಕೂರಿನಿಂದ ಬೆಂಗಳೂರಿಗೆ ವಿವಿಧ ಐಟಿ ಕಂಪನಿಗಳಿಗೆ ಕೆಲಸಕ್ಕೆ ಹೋಗುತ್ತಿರುವುದರಿಂದ ತುಮಕೂರಿನಲ್ಲೇ ಐಟಿ ಹಬ್ಸನ್ನು ನಿರ್ಮಾಣ ಮಾಡಬೇಕೆಂದು ವಿನಂತಿಸಿದ್ದಾರೆ.
ತುಮಕೂರು ಪ್ರಮುಖ ಇಪ್ಪತ್ತು ಜಿಲ್ಲೆಗಳಿಗೆ ಆದುಹೋಗುವ ಹೆಬ್ಬಾಗಿಲಾಗಿದ್ದು ಏಷ್ಯಾಖಂಡದಲ್ಲಿಯೆ ಅತಿ ದೊಡ್ಡ ಕೈಗಾರಿಕಾ ಪ್ರದೇಶವನ್ನು ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಆಗ್ರಹಿಸಿದ್ದಾರೆ.
ನಗರದ ಮಹಾನಗರ ಪಾಲಿಕೆಯ ಸರಹದ್ದಿನಲ್ಲಿ ಬರುವ ಕೈಗಾರಿಕ ಪ್ರದೇಶಗಳ ಆಸ್ತಿ ತೆರಿಗೆಯನ್ನು ಪ್ರತ್ಯೇಕ ಕೈಗಾರಿಕಾ ವರ್ಗ ಮಾಡಿ ಕಮರ್ಷಿಯಲ್ ಹಾಗೂ ರೆಸಿಡೆನ್ಷಿಯಲ್ ಸ್ಲಾಬ್ ಗಿಂತ ಕಡಿಮೆ ಮಾಡುವ ಬೇಡಿಕೆಯು ಸರ್ಕಾರದ ಮುಂದಿದ್ದು ಕೆ ಐ ಎ ಡಿ ಬಿ ಇಂದ ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿಕೊಂಡು ನಂತರ ಪ್ರತ್ಯೇಕ ಕೈಗಾರಿಕಾ ವರ್ಗ ಮಾಡಿ ಕಮರ್ಷಿಯಲ್ ಹಾಗೂ ರೆಸಿಡೆನ್ಷಿಯಲ್ ಸ್ಲಾಬ್ ಗಿಂತ ಆಸ್ತಿ ತೆರಿಗೆಯನ್ನು ಕಡಿಮೆ ಮಾಡಿ ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆಯಂತೆ ನಗರ ಕೈಗಾರಿಕಾ ಪ್ರದೇಶಗಳ ಆಸ್ತಿಗಳಿಗೆ ತೆರಿಗೆಯನ್ನು ನಿಗದಿ ಮಾಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟ್ರೇಡರ್ಸ್ ಗಳಿಗೆ ಟ್ರೇಡ್ ಲೈಸೆನ್ಸ್ ಅಬಾಲಿಷ್ ಮಾಡುವುದು , ಈಗಾಗಲೇ GST ಅಡಿಯಲ್ಲಿ ಎಲ್ಲಾ ದಾಖಲೆಗಳನ್ನು ಒದಗಿಸಿ ನೋಂದಣಿ ಆಗಿರುತ್ತೇವೆ ನಗರದ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗುವಂತೆ ಪ್ರಮುಖವಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಪ್ರತ್ಯೇಕವಾದ ಕೆ ಐ ಏ ಡಿ ಬಿ ಕಚೇರಿ, ಇಎಸ್ಐ ಆಸ್ಪತ್ರೆಯ ನಿರ್ಮಾಣ, ಅಗ್ನಿಶಾಮಕ ಠಾಣೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿ, ಬೆಸ್ಕಾಂ ಮುಖ್ಯ ಕಚೇರಿ, ಬ್ಯಾಂಕುಗಳ ಸ್ಥಾಪನೆ, ಹಾಗೂ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು.
ವ್ಯಾಪಾರಸ್ಥರ , ಕೈಗಾರಿಕೋದ್ಯಮಗಳ, ವಾಣಿಜ್ಯೋದ್ಯಮಗಳ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಹಾಗೂ ಉಚಿತ ಆರೋಗ್ಯ ವಿಮೆ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು.
60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ತಮ್ಮ ಜೀವಿತ ಅವಧಿಯಲ್ಲಿ ಸರ್ಕಾರಕ್ಕೆ ಎಲ್ಲಾ ಬಗ್ಗೆಯ ತೆರಿಗೆಗಳನ್ನು ಕಟ್ಟುತ್ತಾ ಬಂದಿದ್ದು ಸರಿ ಅಷ್ಟೇ , ಇವರಿಗೆ ತಮ್ಮ 60 ವರ್ಷದ ನಂತರ ವಯಸ್ಸಿನಲ್ಲಿ ಪಿಂಚಣಿ ಯೋಜನೆ ಜಾರಿಗೊಳಿಸ ಬೇಕು ಈಗ ಹಾಲಿ ಇರುವ ಮೆಟ್ರೋ ಟ್ರೈನ್ ಸರ್ವಿಸ್ ಅನ್ನು ತುಮಕೂರು ಹಾಗೂ ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೂ ಮೆಟ್ರೋ ರೈಲು ಸಂಪರ್ಕವನ್ನು ವಿಸ್ತರಿಸಬೇಕು.
ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೂಕ್ತವಾದ ಜಾಗದಲ್ಲಿ ಕೋಲ್ಡ್ ಸ್ಟೋರೇಜ್ ಹಾಗೂ ಉಗ್ರಾಣಗಳನ್ನು ಸ್ಥಾಪನೆ ಮಾಡಬೇಕು.
ತುಮಕೂರು ನಗರದಲ್ಲಿ ಎಲಿ ಪ್ಯಾಡ್ ಗಳನು ನಿರ್ಮಾಣ ಮಾಡಬೇಕು.
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವುದು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತುಮಕೂರು ನಗರ ಈಗಾಗಲೇ ಸ್ಮಾರ್ಟ್ ಸಿಟಿ ಯಾಗಿದ್ದು ಇದನ್ನು ಅಂತರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಮೇಲ್ದರ್ಜೆಗೆ ಏರಿಸಬೇಕು.
ತೆಂಗು, ಹುಣಸೆ, ಮಾವು, ಕಡಲೆಕಾಯಿ, ಹಾಗೂ ಹಲಸು ಉತ್ಪನ್ನಗಳ ಅಭಿವೃದ್ಧಿ ಘಟಕಗಳನ್ನು ತುಮಕೂರು ಜಿಲ್ಲೆಯ ಸೂಕ್ತ ಸ್ಥಳಗಳಲ್ಲಿ ಸ್ಥಾಪನೆ ಮಾಡಬೇಕು.
ಟ್ರೆಂಡ್ ಅಂಡ್ ಇಂಡಸ್ಟ್ರಿಗಳಿಗೆ ಹಾಲಿ ಇರುವ ವೃತ್ತಿ ತೆರಿಗೆಯನ್ನು ರದ್ದು ಮಾಡಬೇಕು ಎಂಬ ಸಲಹೆಯನ್ನು ಹಣಕಾಸು ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಮ್ಮ ಪತ್ರಿಕೆ ಹೇಳಿಕೆ ಮೂಲಕ ವಿನಂತಿಸಿದ್ದಾರೆ.