ಕಾನೂನಾತ್ಮಕ ಗೊಳಿಸಿ ಒಳ ಮೀಸಲಾತಿ ಜಾರಿ ಗೃಹ ಸಚಿವ ಡಾ. ಜಿ ಪರಮೇಶ್ವರ್
ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಜಾರಿಗೆ ಪರಿಶೀಲನೆ
ತುಮಕೂರು ಮಾರ್ಚ್ 22: ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾಕ್ಟರ್ ಬಿ .ಆರ್. ಅಂಬೇಡ್ಕರ್ ಜಯಂತಿ ಮತ್ತು ಮಹಾನಗರ ಪಾಲಿಕೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ತಳಿ ನಿರ್ಮಾಣದ ಬಗ್ಗೆ ಚರ್ಚಿಸಲು ಕರೆದಿದ್ದ ವಿವಿಧ ದಲಿತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ. ಪರಮೇಶ್ವರ್ ಚಿತ್ರದುರ್ಗ ಸಮಾವೇಶದಲ್ಲಿ ನಿರ್ಣಯ ಕೈಗೊಂಡಂತೆ “ಚಿತ್ರದುರ್ಗ ರೆಜುಲೇಷನ್ ” ಇಂದು ನಾನೇ ಬರೆದು ಮಂಡಿಸಿದ್ದ ವಾಕ್ಯ.
ಆದರೆ ಆಗ ಕೆಲವು ಸಮುದಾಯಗಳು ಅದಕ್ಕೆ ವಿರುದ್ಧವಾಗಿ ನಿಂತಿದ್ದರು. ಆದರೆ ಈಗ ಎಲ್ಲರೂ ಸಹಮತಿಸಿದ್ದು ಸಚಿವರಾದ ಸತೀಶ್ ಜಾರಕಿಹೊಳಿ ಕೆ.ಎಚ್. ಮುನಿಯಪ್ಪ ಮಾಜಿ ಸಚಿವರಾದ ಎಚ್ ಆಂಜನೇಯ ಪರಿಸರ ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ಮಾಜಿ ಸಚಿವ ಪರಮೇಶ್ವರ್ ನಾಯ್ಕ ಸಚಿವರಾದ ಎಚ್ ಸಿ ಮಹದೇವಪ್ಪ ಎಲ್ಲರೂ ಒಪ್ಪಿಗೆ ಸೂಚಿಸಿದ್ದು .
ಆದ ಕಾರಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಜಾರಿ ಮಾಡಲು ಸದಾ ಸಿದ್ಧ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿರುವಂತೆ ಅದನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು.
ಸುಮಾರು 10 ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯವಾಗಿ ಚರ್ಚಿಸಿ ಜಸ್ಟಿಸ್ ನಾಗಮೋಹನ್ ದಾಸ್ ಏಕ ಸದಸ್ಯ ಪೀಠವನ್ನು ಸುಪ್ರೀಂ ಕೋರ್ಟ್ ನ ತೀರ್ಪಿನಂತೆ ಎಂಪೆರಿಕಲ್ ಡೇಟಾ ಪಡೆಯಲು ನೇಮಿಸಲಾಗಿದೆ ಅದರಂತೆ ವರದಿ ಬಂದ ನಂತರ ಜಾರಿಗೊಳಿಸಲು ಸಿದ್ಧರಿದ್ದೇವೆ.
ಜಸ್ಟಿಸ್ ನಾಗಮೋಹನ್ ದಾಸ್ ಅವರಿಗೂ ಸಹ ನಿರ್ದಿಷ್ಟ ಜಾತಿ ಗಣತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಅಂದರೆ ಈ ಹಿಂದೆ ನೇಮಿಸಿದ್ದ ಸದಾಶಿವ ಆಯೋಗದ ವರದಿ ಅದು ತಾಂತ್ರಿಕ ಕಾರಣಗಳಿಂದ ಕಾನೂನಿನ ಅಡೆತಡೆಗಳು ಇರುವುದರಿಂದ ಅಂದರೆ ಅದರಲ್ಲಿ ಎಂಪಾರಿಕಲ್ಲಾಗಿ ನಿರ್ದಿಷ್ಟ ಜನಸಂಖ್ಯಾ ಆಧಾರ ಇಲ್ಲದಿರುವುದರಿಂದ ಆದ್ದರಿಂದ ಮಾಹಿತಿ ಪಡೆದು ಒಳಮಿಸಲಾತಿಯನ್ನು ವರ್ಗೀಕರಿಸಲು ಸಾಧ್ಯವಿಲ್ಲ ಅದರಲ್ಲಿರುವ ಡೇಟಾವು ಆ ಸಾಂದರ್ಭಿಕವಾಗಿ ಇರುವುದೇ ಹೊರತು ಅದನ್ನು ಕಾನೂನಾತ್ಮಗೊಳಿಸಲು ಸಾಧ್ಯವಿಲ್ಲ ಕಾರಣ ಅದೊಂದು ಕೇವಲ ವರದಿ ಅಷ್ಟೇ ಇಂದು ತಿಳಿಸಿದರು.
ಅದನ್ನು ಬಿಟ್ಟರೆ 2011ರ ಜನಗಣತಿ ಆಧಾರದ ಮೇಲೆ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ ಕಾರಣ 2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಜಾತಿಗಳ ಬಗ್ಗೆ ಅದರಲ್ಲಿ ನಿಖರವಾಗಿ ತಿಳಿಸಿಲ್ಲ ದೇಶದಲ್ಲಿ 2011ರ ನಂತರ ಜನಗಣತಿ ಸಾಧ್ಯವಾಗಿಲ್ಲ ಇದನ್ನೆಲ್ಲ ಕೂಲಂಕುಶವಾಗಿ ಚರ್ಚಿಸಲು ನನ್ನ ನೇತೃತ್ವದಲ್ಲಿ ನನ್ನ ಮನೆಯಲ್ಲಿಯೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಶಾಸಕರುಗಳನ್ನು ಮತ್ತು ಮಂತ್ರಿಗಳನ್ನ ನಮ್ಮ ಮನೆಯಲ್ಲಿ ಹಲವು ಬಾರಿ ಸಭೆ ಸೇರಿ ಚರ್ಚಿಸಿದ್ದೇವೆ ಹಾಗೂ ಜಸ್ಟಿಸ್ ನಾಗಮೋಹನ್ ದಾಸ್ ಅವರನ್ನು ಸಹ ಭೇಟಿ ಮಾಡಿ ಯಾವುದೇ ಕಾರಣಕ್ಕೂ ಒಳ ಮೀಸಲಾತಿಯ ವಿಂಗಡನೆ ಕಾನೂನಿನ ಚೌಕುಟಿನಲ್ಲೇ ಇರಬೇಕು ಶಾಸನಬದ್ಧವಾಗಿರಬೇಕು ಮುಂದೆ ಯಾರೇ ಸಹ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಬಾರದು ಸರ್ಕಾರವು ಎಲ್ಲರಿಗೂ ನ್ಯಾಯ ಒದಗಿಸಿದೆ ಎಂಬ ಭಾವನೆಯಲ್ಲಿರಬೇಕು ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ತಾವು ವರದಿಯನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಸಹ ತಿಳಿಸಿದ್ದು. ವೈಯಕ್ತಿಕವಾಗಿ ನಾನು ಸಹ ಅವರಲ್ಲಿ ಮನವಿ ಮಾಡಿದ್ದೇನೆ.
ಆದರೆ ಒಂದು ಆಶಾ ಭಾವನೆ ಏನೆಂದರೆ ಕರ್ನಾಟಕ ಸರ್ಕಾರ 140 ಕೋಟಿ ಖರ್ಚು ಮಾಡಿ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ತಯಾರಿಸಿರುವ ವರದಿಯಲ್ಲಿ ಕೂಲಂಕುಶವಾದ ಜಾತಿಗಣತಿಯಿದೆ ಎಂಬ ಮಾಹಿತಿ ಇದೆ.
ಆದ್ದರಿಂದ ಹಿಂದುಳಿದ ವರ್ಗ ಸಿದ್ಧಪಡಿಸಿರುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕೆಂದು ನಾನು ಸಹ ಸರ್ಕಾರವನ್ನು ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತಿದ್ದೇನೆ.
ಆ ವರದಿಯ ಪ್ರಕಾರ ಜಸ್ಟಿಸ್ ನಾಗಮೋಹನ್ ದಾಸ್ ಅವರಿಗೂ ವರದಿ ಸಿದ್ದಪಡಿಸಲು ಅನುಕೂಲವಾಗುತ್ತದೆ ಎಂಬ ಆಲೋಚನೆ ಇದೆ ಕೆಲವೇ ದಿನಗಳಲ್ಲಿ ಅವರು ಸಲ್ಲಿಸುವ ವರದಿಯನ್ನು ಆಧರಿಸಿ ಒಳಮಿಸಲಾತಿಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು.
ಈ ಸಂಬಂಧ ಪಾದಯಾತ್ರೆ ನಡೆಸಿದ ಎಲ್ಲ ಪಾದಯಾತ್ರೆಗಳಿಗೂ ಶಾಂತಿಯುತವಾಗಿ ನಡೆದುಕೊಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.