ಮಯೂರ ಬೇಕರಿಯಲ್ಲಿ ಹಳಸಿದ ಪದಾರ್ಥ ಮಾರಾಟ, ಕಾನೂನು ಕ್ರಮ ಜರುಗಿಸಲು ಒತ್ತಾಯ
ಭೀಮ್ ಆರ್ಮಿ ಸಂಘಟನೆಯ ತುಮಕೂರು ಜಿಲ್ಲೆಯ ಉಪಾಧ್ಯಕ್ಷ ನವೀನ್ ಕುಮಾರ್
ಕೊರಟಗೆರೆ : ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಯೂರ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯಲ್ಲಿ ತಯಾರಿಸಿದ ಪದಾರ್ಥಗಳು ಕಳಪೆಯಿಂದ ಕೂಡಿದ್ದು ಹಳಸಿದ ಎಗ್ ರೋಲ್ ಗ್ರಾಹಕರಿಗೆ ನೀಡಿದ್ದಾರೆ ಎಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ನವೀನ್ ಕುಮಾರ್ ರವರು ದೂರು ನೀಡಿರುವ ಘಟನೆ ನಡೆದಿದೆ.
ದಿನಾಂಕ 3 ಮಾರ್ಚ್ ರಂದು ಸಂಜೆ 8-30 ರ ವೇಳೆಯಲ್ಲಿ ನಾನು ಊರಿಗೆ ಸಮಯದಲ್ಲಿ ಮಕ್ಕಳಿಗೆ ಹಾಗೂ ನನಗೆ ಸದರಿ ಬೇಕರಿಯಲ್ಲಿ ಎಗ್ ರೋಲ್ ಅನ್ನು ಖರೀದಿಸಿ ಮನೆಗೆ ಪಟ್ಟಣ ಕಟ್ಟಿಸಿಕೊಂಡು ಹೋಗಿ ಮಕ್ಕಳಿಗೆ ನೀಡಿ ಹಾಗೂ ನಾನು ತಿನ್ನಲು ಹೋದಾಗ ಈ ಆಹಾರದಿಂದ ಕೊಳೆತ ವಾಸನೆ ಬಂದಾಗ ಪರಿಶೀಲಿಸಿದಾಗ ಪದಾರ್ಥವು ಹಳಸಿರುವುದು ಕಂಡು ಬಂದ ಹಿನ್ನಲೆ ಕೂಡಲೇ ಕೊರಟಗೆರೆಯ ಮಯೂರ ಬೇಕರಿಗೆ ತೆರಳಿ ತಿಳಿಸಿದಾಗ ಅಲ್ಲಿನ ಸಿಬ್ಬಂದಿಗಳು ಉಡಾಫೆ ಮಾತಗಳನ್ನಾಡಿದರು.
ಕೂಡಲೇ ಆಹಾರ ಸಂರಕ್ಷಾಣಾಧಿಕಾರಿಗಳು ಕೊರಟಗೆರೆಯ ಮಯೂರ ಬೇಕರಿ ಅಂಡ್ ಸ್ವೀಟ್ಸ್ ಅಂಗಡಿಯಲ್ಲಿ ತಯಾರಾಗುವ ಎಲ್ಲಾ ಪದಾರ್ಥಗಳನ್ನು ಪರಿಶೀಲಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ ಎಂದು ಭೀಮ್ ಆರ್ಮಿ ಸಂಘಟನೆಯ ತುಮಕೂರು ಜಿಲ್ಲೆಯ ಉಪಾಧ್ಯಕ್ಷ ನವೀನ್ ಕುಮಾರ್ ಆಗ್ರಹಿಸಿದರು.
ವರದಿ: ನವೀನ್ ಕುಮಾರ್, ಕೊರಟಗೆರೆ.