ಕೊರಟಗೆರೆ ಪಟ್ಟಣದಲ್ಲಿ ಕನ್ನಡ ಧ್ವಜ ಸ್ತಂಭ ತೆರವು ಪ್ರಕರಣ ಕರವೇ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ
ಕೊರಟಗೆರೆ ಮಾ,03: ನಾಡದ್ವಜ ಕೊರಟಗೆರೆಯಲ್ಲಿ ಮರು ನಿರ್ಮಾಣ ಮಾಡುವಂತೆ ಕೊರಟಗೆರೆ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷ ಟಿ.ಎ ನಾರಾಯಣ ಗೌಡ ಪ್ರತಿಭಟನೆಯ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡದ ಧ್ವಜಸ್ತಂಭ ತೆರವು ಮಾಡುವ ಕಾರ್ಯವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡಿರುವುದು ಆಕ್ಷೇಪಣಾರ್ಹ ಕೊರಟಗೆರೆಯಲ್ಲಿ ನಾಡಧ್ವಜ ಪುನರ್ ನಿರ್ಮಾಣ ಮಾಡಬೇಕು ಗಡಿಯಲ್ಲಿ ಕನ್ನಡದ ವಿರುದ್ಧವಾಗಿ ಮಾತನಾಡುವಾಗ ಇಗಿನ ಶಾಸಕರು ಯಾರೂ ಮಾತನಾಡುವುದಿಲ್ಲ ವಿಧಾನಸೌದ ಹಿಂದೆ ಚಿಂತಕರ ಚಾವಡಿಯಾಗಿತ್ತು ಇವತ್ತು ಇಂದು ವಿಧಾನಸೌದಲ್ಲಿ ಕನ್ನಡದ ಪರವಾಗಿ ಯಾರು ಇಲ್ಲ ಕೊರಟಗೆರೆಯ ಕನ್ನಡಿಗರೇ ಇಂತಹ ವಿಚಾರವನ್ನು ಖಂಡಿಸಬೇಕು.
ತಕ್ಷಣವೇ ಕನ್ನಡ ಧ್ವಜ ಮರು ನಿರ್ಮಾಣ ಮಾಡಬೇಕು ಬೆಳಗಾವಿಯ ಗಡಿಯಲ್ಲಿ ಕರ್ನಾಟಕದ ಪೊಲೀಸರ ಮೇಲೆ ದೌರ್ಜನ್ಯ ಆದಾಗ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ನವರು ಮಾತನಾಡಲಿಲ್ಲ ನಮ್ಮ ಕರ್ನಾಟಕದ ರಕ್ಷಣ ವೇದಿಕೆ ಹೋರಾಟವನ್ನು ಪ್ರಾರಂಭಿಸಿದ್ದು ಯಾರು ಕನ್ನಡದ ಪರವಾಗಿ ದ್ವನಿ ಎತ್ತುವನೋ ಅವನೇ ನಿಜವಾದ ಕನ್ನಡಿಗ ನಾಡುನುಡಿಗೆ ವಿರೋಧವಾಗಿ ನೆಡೆದುಕೊಂಡರೆ ಸಹಿಸೋದಿಲ್ಲ ಇದೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿಮಾಡಿ ನಾಡದ್ವಜ ಪುನರ್ ನಿರ್ಮಾಣ ಮಾಡುವಂತೆ ಮನವಿ ಮಾಡುತ್ತೇನೆ.ಕೊರಟಗೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಓರ್ವ ಎಎಸ್ ಪಿ, ಇಬ್ಬರು ಡಿವೈಎಸ್ ಪಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ. ಗೃಹ ಸಚಿವ ಡಾ ಜಿ ಪರಮೇಶ್ವರ ಸ್ವಕ್ಷೇತ್ರವಾಗಿರುವ ಕೊರಟಗೆರೆ.
- ಘಟನೆಯ ವಿವರ:
2022 ನವೆಂಬರ್ 2 ರಂದು ಕನ್ನಡ ಧ್ವಜ ಸ್ತಂಭವನ್ನ ನಿರ್ಮಿಸಲಾಗಿತ್ತು.
ಕೊರಟಗೆರೆ ಪಟ್ಟಣ ಪಂಚಾಯ್ತಿಯಿಂದ ಅನುಮತಿ ಪಡೆಯದೆ ಕನ್ನಡ ಧ್ವಜ ನಿರ್ಮಾಣ ಮಾಡಲಾಗಿತ್ತು.
ವಾಹನ ಸಂಚಾರಕ್ಕೆ ಅಡಚಣೆ ಆಗುತ್ತೆ ಎಂದು ಕನ್ನಡ ಧ್ವಜ ಸ್ತಂಭ ತೆರವು.
ಕಳೆದ 23 ರಂದು ತಡರಾತ್ರಿ ಕಾರ್ಯಚರಣೆ ತೆರವು.
ಕೊರಟಗೆರೆ ತಹಶಿಲ್ದಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ತೆರವುಗೊಳಿಸಲಾಗಿತ್ತು.
ವರದಿ: ನವೀನ್ ಕುಮಾರ್, ಕೊರಟಗೆರೆ.