ಬೆಂಗಳೂರು: ಇಂದು ನಡೆದ ಮಂತ್ರಿಗಳ ಪದಕ ಪ್ರಧಾನ ಹಾಗೂ ನೂತನ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ,ಅಗ್ನಿ ಅವಘಡ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿ ಶಮನ ಮಾಡುವ ಎಲ್ಲಾ ಅಗ್ನಿ ಶಾಮಕದಳದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.
ಅದರಲ್ಲೂ ನಮ್ಮ ಇಲಾಖೆ ಅನೇಕ ದಶಕಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಯಲ್ಲಿ ಸಮರ್ಪಣಾ ಭಾವ ಮೆರೆಯುತ್ತಾ ಬಂದಿದೆ. ಇವರ ಈ ಸೇವೆ ರಾಷ್ಟ್ರ ಮಟ್ಟದಲ್ಲಿಯೇ ಮಾದರಿಯಾಗಿ ಅಗ್ರಸ್ಥಾನ ದಲ್ಲಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಧಾನ ಮಾಡಿದರು ಹಾಗೂ ಭಾಜನರಾದ ಅಧಿಕಾರಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನೂ ತಿಳಿಸಿದರು.
ಸಮಾರಂಭದಲ್ಲಿ DGP ಕಮಲ್ ಪಂತ್, ADGP ಹರಿಶೇಖರನ್, ADGP M. ನಂಜುಂಡಸ್ವಾಮಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.